ಸುಳ್ಯ: ಅಪರಾಧ ಮುಕ್ತ ಗ್ರಾಮ ಎಂದು ಘೋಷಿಸಿಕೊಂಡಿರುವ ಮಂಡೆಕೋಲು ಗ್ರಾಮದ ಕೇನಾಜೆ ಎಂಬಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.

rape

ಸ್ಥಳೀಯ ನಿವಾಸಿ ರಾಜೇಶ್ ಮಾಣಿಯಾಣಿ ಕೇನಾಜೆ ಎಂಬಾತನ ಮೇಲೆ ಬಾಲಕಿ ಮನೆಯವರು ಸಂಶಯ ವ್ಯಕ್ತಪಡಿಸಿದ್ದು, ಪೊಲೀಸರು ಆತನ ಮನೆಗೆ ಮೂರು ಬಾರಿ ಹೋದಾಗಲೂ ಆತ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ. ಹೀಗಾಗಿ ಆತನೇ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಶೋಧಕಾರ್ಯ ಮುಂದುವರಿಸಿದ್ದಾರೆ. ಆತನ ಮೊಬೈಲ್ ಜಾಡು ಹಿಡಿದಾಗ ಮೊಬೈಲ್ ಕೇರಳ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವುದು ಗೊತ್ತಾಗಿರುವುದರಿಂದ ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

By suddi9

Leave a Reply

Your email address will not be published. Required fields are marked *