ಸುದ್ದಿ9 ಕೈಕಂಬ: ಗುರುಪುರ ಕೈಕಂಬ ಸಮೀಪದ ಕಂದಾವರದಲ್ಲಿರುವ ಪಾಂಪೆ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳು ಡಿ.24ರಂದು ಜರುಗಿತು.
ಡಿ.24ರ ರಾತ್ರಿ 8 ಗಂಟೆಯಿಂದ ಚರ್ಚ್ ನಲ್ಲಿ ಧಾರ್ಮಿಕ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಚರ್ಚ್ನ ಫಾದರ್ ನಿರ್ವಹಿಸಿದರು. ಇದಾದ ಬಳಿಕ ಪಿವೈಸಿ ಯೂತ್ ಸಂಘದಿಂದ ನಾನಾ ಬಗೆಯ ಮನೋರಂಜನ ಕಾರ್ಯಕ್ರಮಗಳು ನಡೆದವು.
ಚರ್ಚ್ನ ಹೊರಾಂಗಣದಲ್ಲಿ ಏಸುಕ್ರಿಸ್ತರ ಗೋದಳಿ ನಿರ್ಮಿಸಲಾಗಿತ್ತು. ಕ್ರಿಸ್ಮಸ್ ಕೇಕ್ನಲ್ಲಿ ಸಾಂತಾಕ್ಲಾಸ್ ಹಾಗೂ ಏಸು-ಮೇರಿಯಮ್ಮನವರ ವರ್ಣ ಚಿತ್ರಗಳನ್ನು ರಚಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಕ್ರಿಸ್ಮಸ್ ಕೇಕ್ ರೂ. 3000 ವಿಗೆ ಏಲಂ ಮಾಡಲಾಯಿತು..




















