ಬಂಟ್ವಾಳ: ಬೀಡಿ ಉದ್ಯಮಿ, ಸಾಮಾಜಿಕ ನೇತಾರ, ಸಿಪಿಐಎಂ ಪಕ್ಷದ ನಾಯಕ, ಧಾರ್ಮಿಕ ಕ್ಷೇತ್ರದ ಸಾಧಕ ಮಂಗಳೂರು ಸತೀಶ ಬೀಡಿ ಸಂಸ್ಥೆಯ ಸಂಸ್ಥಾಪಕ ಬಿ. ಮಂಜುನಾಥ ಸಪಲ್ಯ(80) ಡಿ. 21ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅವರು 1974ರಲ್ಲಿ ಬೀಡಿ ಉದ್ಯಮ ಸ್ಥಾಪಿಸಿ ಸಹಸ್ರಾರು ಮಂದಿಗೆ ಉದ್ಯೋಗ ಆಶ್ರಯ ನೀಡಿದ್ದರು.
ಬಂಟ್ವಾಳ ಬಡ್ಡಕಟ್ಟೆ ಭಗವಾನ್ ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರ, ಬಂಟ್ವಾಳ ರಾಯರ ಚಾವಡಿ ದೈವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿದ್ದರು. ಅತ್ತಾವರ ಶ್ರೀ ಉಮಾಮಹೇಶ್ವರ ದೇವಸ್ಥಾನ, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರ, ಮಂಜೇಶ್ವರ ಶ್ರೀ ಕೀರ್ತೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ವಿಶೇಷ ಕೊಡುಗೆ ಸಲ್ಲಿಸಿದ್ದರು.

MANJUNATHA SAPALYA
ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಗೌರವ ಅಧ್ಯಕ್ಷರು, ಸುಮಂಗಲಾ ಕ್ರೆಡಿಟ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರು, ಬಂಟ್ವಾಳ ಪಟ್ಟಣ ಪಂಚಾಯತ್ನಲ್ಲಿ ಕಮ್ಯುನಿಸ್ಟ್ ಪಕ್ಷದ ಆಡಳಿತ ಅವಧಿಯಲ್ಲಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮನೆಗೆ ಭೇಟಿ ನೀಡಿ ಸಂತಾಪ ತಿಳಿಸಿದರು. ಸಂಸದ ನಳಿನ್ ಕುಮಾರ್ ಸಂತಾಪ ಸೂಚಿಸಿದರು.
ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ಮಾಜಿ ಮೇಯರ್ ಕೆ.ಕೆ.ಮೆಂಡನ್, ಮನಪಾ ಸದಸ್ಯ ಪ್ರಕಾಶ್ ಪಡೀಲ್, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ. ಸದಸ್ಯರಾದ ಬಿ.ಪದ್ಮಶೇಖರ ಜೈನ್, ವಸಂತ ಕುಮಾರ್ ಅಣ್ಣಳಿಕೆ, ಪುರಸಭಾ ಸದಸ್ಯರಾದ ಬಿ. ದೇವದಾಸ ಶೆಟ್ಟಿ, ಜಗದೀಶ ಕುಂದರ್, ಪ್ರವೀಣ್, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ. ಆನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘ ಸಪಲ್ಯ, ಕೆಡಿಪಿ ಸದಸ್ಯ ಉಮೇಶ ಬೋಳಂತೂರು, ಬಂಟ್ವಾಳ ಕಸಾಪ ಅಧ್ಯಕ್ಷ ಜಯಾನಂದ ಪೆರಾಜೆ, ಕಮ್ಯುನಿಸ್ಟ್ ನಾಯಕರುಗಳಾದ ವಾಸುಗಟ್ಟಿ, ಸಂಜೀವ ಬಂಗೇರ, ವಿಶ್ವನಾಥ ನಾಯ್ಕ, ವಸಂತ ಆಚಾರಿ, ಬಾಲಕೃಷ್ಣ , ಬಿ. ಶೇಖರ, ಎಡಪದವು ಗಾಣಿಗರ ಸಂಘದ ಅಧ್ಯಕ್ಷ ಭಾಸ್ಕರ ಎಡಪದವು, ಉಳ್ಳಾಲ ಗಾಣಿಗರ ಸಂಘದ ಗೌ. ಅಧ್ಯಕ್ಷ ಯು. ಎಸ್.ಪ್ರಕಾಶ್ ಮೊದಲಾದ ಗಣ್ಯರು ಮೃತರ ಮನೆಗೆ ಭೇಟಿ ನೀಡಿದ್ದರು.
ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ವಿಶ್ವಾಸ್ದಾಸ್ ಕುಮಾರ್ ಸಂತಾಪ ಹೇಳಿಕೆ ನೀಡಿದ್ದಾರೆ

By Suddi9

Leave a Reply

Your email address will not be published. Required fields are marked *