ಸದ್ಯದಲ್ಲೇ ಅಲಂಕರಿಸಲಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ನಿನ್ನೆ ಯಡಿಯೂರಪ್ಪ ಅವರು ಬಿಜೆಪಿ ವಾಪಸಾಗಿದ್ದಕ್ಕೆ ಸಖತ್ ಖುಷಿಗೊಂಡಿದ್ದಾರೆ. ಆ ಖುಷಿಯಲ್ಲೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಭಾರತೀಯ ಜನತಾ ಪಕ್ಷಕ್ಕೆ ಮರಳಿದ ಇಂದಿನ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ ಎಂದು ಬಣ್ಣಿಸಿದ್ದಾರೆ. ಗಮನಾರ್ಹವೆಂದರೆ ಗುರುವಾರ ಕೆಜೆಪಿಯ ಆರು ಶಾಸಕರ ಪೈಕಿ ಯಡಿಯೂರಪ್ಪ, ಯುಬಿ ಬಣಕಾರ್ ಹಾಗೂ ವಿಶ್ವನಾಥ್ ಪಾಟೀಲ ಮಾತ್ರ ನಿನ್ನೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
