ಬಂಟ್ವಾಳ :ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ದ.ಕ. ಜಿಲ್ಲಾ ಸಂಘದ 2026- 2028 ರ ಅವಧಿಗೆ ಧನ್ ರಾಜ್ ಶೆಟ್ಟಿ ಪರಂಗಿಪೇಟೆ ಪುನರಾಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ‌ಈ ಆಯ್ಕೆ ನಡೆಸಲಾಗಿದೆ.


ಉಳಿದಂತೆ ಜಿಲ್ಲಾ ಸಮಿತಿಗೆ ನೂತನ ಪಧಾದಿಕಾರಿಗಳು ಇಂತಿದ್ದಾರೆ. ಕಾರ್ಯದರ್ಶಿಯಾಗಿ ಸಂತೋಷ್ ಕುರಿಯಾಳ, ಕೋಶಾಧಿಕಾರಿಯಾಗಿ ಮಾತುಕುಟ್ಟಿ ಧರ್ಮಸ್ಥಳ ಅವರು ಆಯ್ಕೆಗೊಂಡಿದ್ದಾರೆ. ಜಿಲ್ಲಾಧ್ಯಕ್ಷರಾದ ಧನ್ ರಾಜ್ ಶೆಟ್ಟಿ ಪರಂಗಿಪೇಟೆ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಗೌರವಾಧ್ಯಕ್ಷರಾದ ರಾಜಶೇಖರ್ ಶೆಟ್ಟಿ ಕುಡ್ತಮುಗೇರು, ಕಾರ್ಯದರ್ಶಿ ಮಹೇಶ್ ಬೋಳಾರ್ , ಕೋಶಾಧಿಕಾರಿ ಬೆನಟ್ಹ್ ಡಿಸಿಲ್ವಾ ಮಂಗಳೂರು ಉಪಸ್ಥಿತರಿದ್ದರು.
ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು ತಾಲೂಕು ಘಟಕದ ಪದಾಧಿಕಾರಿಗಳು ಹಾಜರಿದ್ದರು.
ಈ ಸಭೆಯನ್ನು ಇಸ್ಮಾಯಿಲ್ ಬನಾರಿ ಸ್ವಾಗತಿಸಿದರು.ಲೋಹಿತ್ ಬ್ರಹ್ಮರಕೂಟ್ಲ ವಂದಿಸಿದರು. 

By Suddi9

Leave a Reply

Your email address will not be published. Required fields are marked *