ಬಂಟ್ವಾಳ :ಅಮ್ನುಂಜೆ ವೀರ ಯೋಧ ಯಾಧವ ಫ್ರೆಂಡ್ಸ್ (ರಿ.) ವೀರ ಯೋಧ ಯಾಧವ ಫ್ರೆಂಡ್ಸ್ ಮಹಿಳಾ ಘಟಕ ಇದರ ಆಶ್ರಯದಲ್ಲಿ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಅಂಡ್ ರಿಸರ್ಚ್ ಸೆಂಟರ್ ಮಂಗಳೂರು ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಭಾನುವಾರ ನಡೆಯಿತು.

ಉಚಿತ ವೈದ್ಯಕೀಯ ಶಿಬಿರವನ್ನು ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ತಾಲೂಕು ರೈತರ ಸಲಹಾ ಸಮಿತಿ ಅಧ್ಯಕ್ಷ ಡಿ ಎ ಅಬೂಬಕ್ಕರ್ ಅಮ್ಮುಂಜೆ ಮಾತನಾಡಿ, ಕಲುಷಿತ ಆಹಾರ ಹಾಗೂ ಪರಿಸರದಿಂದ ಜನರ ಆರೋಗ್ಯ ಹದಗೆಡುತ್ತಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಒತ್ತಡಮುಕ್ತ ಜೀವನ ನಡೆಸಬೇಕು.
ನಮಗೆ ಔಷಧಿಯೇ ಆಹಾರವಾಗದೆ, ಆಹಾರವೇ ಔಷಧಿಯಾಗುವಂತಿರಬೇಕು. ದೇಶ ಸೇವೆ ಮಾಡಿದ ವೀರ ಯೋಧ ಯಾದವರ ಹೆಸರಿನಲ್ಲಿ ಸಮಾಜಮುಖಿ ಸೇವೆಗಳನ್ನು ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಅಮ್ಮುಂಜೆ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದ ಆಡಳಿತ ಮುಕ್ತೇಸರ ಡಿ.ಎ ನಾಗೇಶ ರಾವ್ ಅಧ್ಯಕ್ಷತೆ ವಹಿಸಿದ್ದರು.
ಅಮ್ಮುಂಜೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಉದ್ಯಮಿ ಬಿ ಮಹಮ್ಮದ್ ಬಟ್ಲಬೆಟ್ಟು,ಅಮ್ಮುಂಜೆ ಶಾಲಾ ಮುಖ್ಯೋಪಾಧ್ಯಾಯ ಡಿ.ಎ. ಹರೀಶ್ ರಾವ್,ವೀರ ಯೋಧ ಯಾದವರ ಸಹೋದರ ಉಮೇಶ್ ಪೂಜಾರಿ,ವೀರ ಯೋಧ ಯಾಧವ ಫ್ರೆಂಡ್ಸ್ ನ ಗೌರವಾಧ್ಯಕ್ಷ ದೇವದಾಸ ಹೆಗ್ಡೆ ಅಮ್ಮುಂಜೆಗುತ್ತು, ಎ ಕರುಣಾಕರ ಆಳ್ವ, ಮಹಿಳಾ ಘಟಕದ ಗೌರವಾಧ್ಯಕ್ಷರಾದ ಹೇಮಲತಾ ಎನ್ ರಾವ್, ವಿಜಯಲಕ್ಷ್ಮಿ ಬಲ್ಲಾಳ್, ಅಧ್ಯಕ್ಷೆ ಚೇತನಾ ಹೆಚ್ ರಾವ್, ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಮಿಥಾಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ವೀರ ಯೋಧ ಯಾಧವ ಫ್ರೆಂಡ್ಸ್ ನ ಅಧ್ಯಕ್ಷರಾದ ಪ್ರಸಾದ್ ಕೆ ಸ್ವಾಗತಿಸಿದರು,ಶ್ರೀಮಹಿ ಭಜನಾ ತಂಡದ ಸದಸ್ಯೆಯರು ಪ್ರಾರ್ಥಿಸಿದರು,ಯಕ್ಷ ಸಂಘಟಕ ಬಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು
ಬಳಿಕ ಉಚಿತವಾಗಿ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು.
