ಬಂಟ್ವಾಳ: ಇಲ್ಲಿನ ಕಸಬಾ ಗ್ರಾಮದ ಮುಗ್ಡಾಲ್ ಗುಡ್ಡೆ ನಿವಾಸಿ ನಾರಾಯಣ (50) ಎಂಬವರು ಸೆ.18ರಂದು ಮನೆಯಿಂದ ಹೋದವರು ವಾಪಾಸ್ ಬಾರದೆ ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


  ಮಾನಸಿಕ ಅಸ್ವಸ್ಥರಾಗಿರುವ ಅವರು, ಮನೆಯಿಂದ ತೆರಳಿ 10 ದಿನ ಕಳೆದರೂ ಈವರೆಗೆ ಮನೆಗೆ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಾರಾಯಣ ಅವರು ಬಿಳಿ ಮಿಶ್ರಿತ ಕೂದಲು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ ಅಗಲವಾದ ಹಣೆ ಹೊಂದಿದ್ದಾರೆ.

ನಾಪತ್ತೆಯಾಗುವ ಸಂದರ್ಭ ಹಳದಿ ಬಣ್ಣದ ಫುಲ್ ಶರ್ಟ್ ಮತ್ತು ಬೂದು-ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಬಲಕೈಯ ಕಿರುಬೆರಳು ನೇರವಾಗಿರುವುದು ಪ್ರಮುಖ ಗುರುತಾಗಿದೆ.  ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.


ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಎಲ್ಲಿಯಾದರೂ ಕಂಡ ಬಂದರೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ  ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ

By Suddi9

Leave a Reply

Your email address will not be published. Required fields are marked *