ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆ ವಿಟ್ಲ, ಗ್ರಾ.ಪಂ.ಮಂಚಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಶಿಬಿರ ಶ್ರೀ ದುಗರ್ಾ ಪರಮೇಶ್ವರಿ ದೇವಸ್ಥಾನ ಮಂಚಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಿ.ಪಂ.ಸದಸ್ಯ ಎಂ.ಎಸ್. ಮಹಮ್ಮದ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಹಿಳೆಯರಿಗೆ ಕಾನೂನಿನ ಮಾಹಿತಿ ಸಿಕ್ಕಿದಾಗ ಮಾತ್ರ ಸಮಾನತೆಯ ಬದುಕು ನಡೆಸಬಹುದು ಮತ್ತು ಮಾನವೀಯ ಬದುಕು ಸಾದ್ಯ ಎಂದರು.

ಅಧ್ಯಕ್ಷತೆಯನ್ನು ತಾ.ಪಂ.ಸದಸ್ಯೆ ಲವೀನ ವಹಿಸಿದ್ದರು. ವೇದಿಕೆಯಲ್ಲಿ ಪಂ.ಸದಸ್ಯರಾದ ಪುಷ್ಪಾ ಕಾಮತ್, ಜ್ಯೋತಿ, ಪ್ರಥಿಮಾ, ರತ್ನಾವತಿ, ಮೋಹನ್ದಾಸ್ ಶೆಟ್ಟಿ ಮತ್ತು ಬಾಸ್ಕರ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ನ್ಯಾಯವಾಧಿಗಳಾದ ಪದ್ಮನಾಭ ಪೂಜಾರಿ, ರವೀಂದ್ರ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಉಮೇಶ್ ನಿರ್ಮಲ್ ಭಾಗವಹಿಸಿದ್ದರು. ಸ್ರ್ತಿ ಶಕ್ತಿ ಸದಸ್ಯರು, ಮಕ್ಕಳ ತಾಯಂದಿಯರು, ಆಶಾ ಕಾರ್ಯಕತರ್ೆಯರು, ಅಂಗನವಾಡಿ ಕಾರ್ಯಕಾತರ್ೆಯರು ಉಪಸ್ಥಿತರಿದ್ದರು. ವಿಟ್ಲ ಸಿ.ಡಿ.ಪಿ.ಒ. ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಮೇಲ್ವಿಚಾರಕಿ ಗುಣವತಿ ವಂದಿಸಿದರು.
