ಬಂಟ್ವಾಳ: ವಿದ್ಯಾರ್ಥಿಗಳು  ಪ್ರತಿಭೆಯೊಂದಿಗೆ ಗುಣನಡತೆಯನ್ನು ಬೆಳೆಸಿಕೊಳ್ಳಬೇಕಾಗಿರುವುದು ಇಂದಿನ ಅವಶ್ಯಕತೆಯಾಗಿದೆ.ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಹೆತ್ತವರ ಜವಾಬ್ದಾರಿಯಾಗಿದೆ ಎಂದು  ನಿವೃತ್ತ ಮುಖ್ಯಶಿಕ್ಷಕ  ಶಾಂತಿರಾಜ ಜೈನ್ ಹೇಳಿದರು.
ಪಾಣೆಮಂಗಳೂರು 1008 ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯದ ಆವರಣದಲ್ಲಿ ನಡೆದ ಬಂಟ್ವಾಳ ಜೈನ್ ಮಿಲನ್ ವತಿಯಿಂದ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 
 ರಾಜೇಂದ್ರ ಜೈನ್ ಪೆರ್ಲ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು ಅವರು ಮಾತನಾಡಿ ಮಕ್ಕಳ ಪ್ರತಿಭೆ ಜೊತೆ ನಡತೆ, ಮತ್ತು ಸಂಸ್ಕೃತಿ  ಬೆಳೆದಾಗ ಮಾತ್ರ ಜೀವನದಲ್ಲಿ ಪರಿಪೂರ್ಣ ತೆ ಹೊಂದಲು ಸಾಧ್ಯ ಎಂದರು, 
ಹಿರಿಯರಾದ ಜಿನರಾಜ ಅರಿಗ ಪಚ್ಚಾಜೆ ಗುತ್ತು,  ಸುಭಾಶ್ಚಂದ್ರ ಜೈನ್ ಉಪಸ್ಥಿತರಿದ್ದರು.
 
ವಿಜಯಕುಮಾರಿ ಇಂದ್ರ ಜೈನ್ ಪರ್ವಗಳ ಬಗ್ಗೆ ಮಾತನಾಡಿದರು.  ಯುವರಾಜ್ ಜೈನ್ ನಡೊಣಿ ಸ್ವಾಗತಿಸಿದರು, ಎಸ್.ಎಸ್.ಎಲ್.ಸಿ.,ಮತ್ತು ಪಿ.ಯುಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರಿಸಲಾಯಿತು. ಕಾರ್ಯದರ್ಶಿ ಜಯ ಕೀರ್ತಿ ವೈಎಸ್ ವರದಿ ವಾಚಿಸಿದರು .ಮದುಮೆತ್ತಿಮಾರು ನಮಿರಾಜ್ ಪೂವಣಿ ಕುಟುಂಬದವರು ಅತಿಥ್ಯ ವಹಿಸಿದ್ದರು. 

By Suddi9

Leave a Reply

Your email address will not be published. Required fields are marked *