ಬಂಟ್ವಾಳ: ಇಲ್ಲಿಗೆ ಸಮೀಪದ ಮೆಲ್ಕಾರ್ ಬೋಳಂಗಡಿಯ ಸತೀಶ ಪಿ ಸಾಲಿಯಾನ್ ಅವರಿಗೆ ಯುವ ಸಂಗಮ ಮೆಲ್ಕಾರ್ (ರಿ.) ಇದರ ವತಿಯಿಂದ ಸನ್ಮಾನಿಸಲಾಯಿತು.ಪ್ರಸ್ತುತ ಕರ್ನಾಟಕ ಸರಕಾರದ ಮೆಸ್ಕಾಂ ಮೆಲ್ಕಾರ್ ಶಾಖೆಯ ನಾಮ ನಿರ್ಧೇಶಕ ಸದಸ್ಯರಾಗಿರುವ ಇವರು ಸ್ಥಳೀಯವಾಗಿ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದು,  ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಪೂರ್ಣೇಶ್ ಅಚಾರ್ಯ, ಕಾರ್ಯದರ್ಶಿ ಯತೀಶ ಅಚಾರ್ಯ, ಕೋಶಾಧಿಕಾರಿ ಅದಿತ್ಯ ಕುದ್ಮುಲ್, ಗಣ್ಯರಾದ ಲಯನ್ ಗಣೇಶ್ ಪ್ರಸಾದ್ ಬೇಂಕ್ಯ, ಲಯನ್ ಮಧುಸೂದನ್ ಅಂಬೆಕಲ್ಲು, ಜನಾರ್ಧನ ಪೂಜಾರಿ ಅಮ್ಮ ಸ್ವೀಟ್ಸ್, ಪ್ರವೀಣ ಮೆಲ್ಕಾರ್, ವಿಠ್ಠಲ ಶೆಣೈ, ರಿಶಿಕಾ ರವಿಕುಮಾರ್, ಶ್ರೀನಿವಾಸ ಗುರುಜ್ಯೋತಿ, ಎಂ.ಎನ್ ಕುಮಾರ್ , ಶಂಕರ ಅಚಾರ್ಯ, ಕಿಶೋರ್ ಕುದ್ಮುಲ್, ಓಂಪ್ರಕಾಶ್, ಅಂಗನವಾಡಿ ಕಾರ್ಯಕರ್ತೆ ವಸಂತಿ ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *