ಬಂಟ್ವಾಳ: ಯುವಶಕ್ತಿಯೇ ದೇಶದ ಭವಿಷ್ಯ.ಯುವಶಕ್ತಿಯಿಂದ ವಿಕಸಿತ ಭಾರತದ ಯಶಸ್ಸು ಸಾಧ್ಯ ಎಂದು ಅರ್ಕುಳ ಮನಸ್ವಿನಿ ಆಸ್ಪತ್ರೆಯ ಖ್ಯಾತ ಮನೋ ವೈದ್ಯ ಡಾ ರವೀಶ್ ತುಂಗ ಅವರು ಹೇಳಿದ್ದಾರೆ.
ಬಂಟ್ವಾಳತಾಲೂಕಿನ ತುಂಬೆಯ ಹನುಮನಗರದಲ್ಲಿ ಭಾಗ್ಯೋದಯ ಮಿತ್ರ ಕಲಾ ವೃಂದ (ರಿ)ತುಂಬೆ ಇದರ ನವೀಕೃತ ಕಟ್ಟಡ “ಭಾಗ್ಯೋದಯ”ವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿ,ಯುವ ಸಂಘಟನೆ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಮಂಗಳೂರು ಎಂ ಪಿ ಫ್ಯಾಮಿಲಿ  ಮಾಲಕ ದಿನೇಶ್ ಎಂ ಪಿ ಮಾತನಾಡಿ,ಸಂಘದ ಕಟ್ಟಡದಲ್ಲಿ ಸತ್ಕಾರ್ಯಗಳು ನಿರಂತರ ನಡೆಯಲಿ ಎಂದು  ಹಾರೈಸಿದರು.
ಅತಿಥಿಯಾಗಿದ್ದ ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ಟಿ ತಾರಾನಾಥ ಕೊಟ್ಟಾರಿ ಮಾತನಾಡಿ, ಸಂಘಟನೆಯೊಂದು ಸಮಾಜಮುಖಿಯಾಗಿ ತೊಡಗಿಸಿಕೊಂಡರೆ ಗ್ರಾಮದ ಅಭ್ಯುದಯಕ್ಕೆ ಕಾರಣವಾಗುತ್ತದೆ . ತುಂಬೆಯ ಯುವ ಸಮುದಾಯ   ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಅಂಗನವಾಡಿ ಶಕಾರ್ಯಕರ್ತೆ ವಿಶಾಲಾಕ್ಷಿ ,ಸಂಘದ ಸ್ಥಾಪಕ ಸದಸ್ಯ ವೆಂಕಪ್ಪ ಕುಲಾಲ್ ಅವರನ್ನು  ಸನ್ಮಾನಿಸಲಾಯಿತು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಾದ ದೀಪ್ತಿ ಪರನೀರು, ತನ್ವಿ ಪರನೀರು  ಅವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು, ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.
ಹಿರಿಯ ಸದಸ್ಯ ಲಿಂಗಪ್ಪ ಕುಲಾಲ್, ಪ್ರ.ಕಾರ್ಯದರ್ಶಿ ರಾಜೇಶ್ ಪರ್ಲಕ್ಕೆ, ಕೋಶಾಧಿಕಾರಿ ಚರಣ್, ಜೊತೆ ಕಾರ್ಯದರ್ಶಿ ಧನ್ಯ ಗೋಪಾಲ್,ಕ್ರೀಡಾ ಕಾರ್ಯದರ್ಶಿ ಅನಿಶ್ ಪರ್ಲಕ್ಕೆ ಉಪಸ್ಥಿತರಿದ್ದರು.
ಭಾಗ್ಯೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಯೋಗೀಶ್ ಕಜೆಕಂಡ ಪ್ರಸ್ತಾವನೆಗೈದರು.
ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕೊಟ್ಟಾರಿ ಸ್ವಾಗತಿಸಿ,ಹರ್ಷ ಸನ್ಮಾನಪತ್ರ ವಾಚಿಸಿದರು, ವಿದ್ಯಾ ಸಚಿನ್ ವಂದಿಸಿದರು ಶಿಕ್ಷಕ ಸಂತೋಷ್ ಕೋಟ್ಯಾನ್  ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *