ಬಂಟ್ವಾಳ: ತಾಲೂಕಿನ  ಕಳ್ಳಿಗೆ ಗ್ರಾಮದ ಪಚ್ಚಿನಡ್ಕ ಓಂ ಫ್ರೆಂಡ್ಸ್ ಕ್ಲಬ್ ( ರಿ )ನ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 27 ವರ್ಷದ ಮೊಸರು ಕುಡಿಕೆ ಉತ್ಸವವು ಸಂಘದ ಶ್ರೀ ಕೃಷ್ಣ ವೇದಿಕೆಯಲ್ಲಿ ನಡೆಯಿತು.
ಬೆಳಿಗ್ಗೆ  ಶ್ರೀ ಕೃಷ್ಣ ದೇವರ ಪ್ರತಿಷ್ಠಾಪನೆಯ‌ ಬಳಿಕ ಓಂ ಫ್ರೆಂಡ್ಸ್ ರಾಧಾಕೃಷ್ಣ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಮದ್ಯಾಹ್ನದ ಬಳಿಕ ಹುಡುಗರ,ಹುಡುಗಿಯರ,ಪುರುಷರು ಮತ್ತು ಮಹಿಳೆಯರ ವಿಭಾಗಗಳಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕ್ಲಬ್ ನ ಅಧ್ಯಕ್ಷರಾದ  ಭುವನೇಶ್ ಪಚ್ಚಿನಡ್ಕ ವಹಿಸಿದ್ದರು. ಸಂಘದ ಮಹಾ ಪೋಷಕರಾದ  ಚಂದ್ರಾವತಿ ಸೇಸಪ್ಪ ಕೋಟ್ಯಾನ್,ಹಿರಿಯರಾದ ನಾರಾಯಣ ಆಚಾರ್ಯ ಕಳ್ಳಿಗೆ,ಸಂಘದ ಪದಾಧಿಕಾರಿಗಳಾದ  ಸದಾಶಿವ ಆಚಾರ್ಯ,ರಾಜೇಶ್ ಆಚಾರ್ಯ, ಚರಣ್ ರಾಜ್ ಆಚಾರ್ಯ,ಮೊಸರು ಕುಡಿಕೆ ಉತ್ಸವ ಸಮಿತಿ ಯ ಸಂಚಾಲಕರಾದ  ಸಂತೋಷ್ ಪಚ್ಚಿನಡ್ಕ, ಪ್ರಶಾಂತ್ ಪಚ್ಚಿನಡ್ಕ,ಅಮಿತಾ ವಿಶ್ವನಾಥ್ ದಾಸರಕೋಡಿ ಉಪಸ್ಥಿತರಿದ್ದರು.


ಸಂಘದ ಪ್ರಧಾನ ಕಾರ್ಯದರ್ಶಿ  ಚರಣ್ ರಾಜ್ ಸ್ವಾಗತಿಸಿದರು. ಹರೀಶ್ ಶೆಟ್ಟಿ ಪಡು ಹಾಗು ಕು. ತೇಜಾಕ್ಷಿ ನಿರೂಪಿಸಿದರು.
ಇದೇ ವೇಳೆ ಚಿಲಿಪಿಲಿ ಗೊಂಬೆ ಬಳಗದ  ಶಂಕರ ನಾರಾಯಣ ಹೊಳ್ಳ ಬಿ.ಸಿ.ರೋಡ್ ,ಬ್ರಹ್ಮರಕೊಟ್ಲು ಬಿ.ಎಸ್.ಬ್ಯಾಂಡ್ ಸೆಟ್ ನ ಮುಖ್ಯಸ್ಥ ಬಿ.ಭೋಜ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.


.ಬಳಿಕ  ಶ್ರೀ ಕೃಷ್ಣ ದೇವರ ವೈಭವಪೂರ್ಣ ಶೋಭಾಯಾತ್ರೆಯು ಗೋರೆಮಾರ್ ನಿಂದ ಪಚ್ಚಿನಡ್ಕದ ವರೆಗೆ ನಡೆಯಿತು. ಶ್ರೀ ಓಂ ಫ್ರೆಂಡ್ಸ್ ರಾಧಾಕೃಷ್ಣ ಭಜನಾ ಮಂಡಳಿ  ಸದಸ್ಯರ ಕುಣಿತ ಭಜನೆ, ಚಿಲಿಪಿಲಿ ಗೊಂಬೆ ಬಳಗದ ಗೊಂಬೆ ಕುಣಿತ, ,ಬಿ.ಸ್.ಬ್ಯಾಂಡ್ ನ ವಾದ್ಯಗೋಷ್ಠಿ,ಪೊಳಲಿ ಯುವಕರ ನಾಸಿಕ್ ಬ್ಯಾಂಡ್,ಕೇಶವ ಸಜಿಪ ಇವರ ವಿವಿಧ ರೀತಿಯ ಗೊಂಬೆಗಳು ಪ್ರದರ್ಶನ ಮೆರವಣಿಗೆಗೆ ಮೆರಗು ನೀಡಿತು.

By Suddi9

Leave a Reply

Your email address will not be published. Required fields are marked *