ಮೂಡುಬಿದರೆ: ಭಾರತೀಯ ವಿ.ವಿ.ಗಳ ಒಕ್ಕೂಟ ನವದೆಹಲಿ ಇವರು ತುಮಕೂರು ವಿ.ವಿ.ಯಲ್ಲಿ ಡಿ.8 ರಿಂದ 12 ರವರೆಗೆ ಏರ್ಪಡಿಸಿದ ಅಂತರ್ ವಿ.ವಿ.ಯುವಜನೋತ್ಸವದಲ್ಲಿ ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ ಏಕಾಂಕ ನಾಟಕ `ಬರ್ಬರೀಕ’ ಪ್ರಥಮ ಪ್ರಶಸ್ತಿ, ಜಾನಪದ ನೃತ್ಯ ವಿಭಾಗದಲ್ಲಿ ಪ್ರದಶರ್ಿಸಿದ ಬಂಜಾರ ನೃತ್ಯ ಹಾಗೂ ದೇವ ವೃದ್ಧರು ಕಿರುನಾಟಕ ದ್ವಿತೀಯ ಪ್ರಶಸ್ತಿ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಉಡುಪಿಯಲ್ಲಿ ಇದಕ್ಕೂ ಮೊದಲು ನಡೆದ ಮಂಗಳೂರು ವಿ.ವಿ.ಅಂತರ್ ಕಾಲೇಜು ಯುವಜನೋತ್ಸವದಲ್ಲಿ ಪ್ರಥಮ ಪ್ರಶಸ್ತಿ ಪಡೆದು ಇದೀಗ ದಕ್ಷಿಣ ಭಾರತ ಯುವಜನೋತ್ಸವದಲ್ಲಿ ಭಾಗವಹಿಸಿದ 22 ವಿ.ವಿ.ಗಳೊಂದಿಗೆ ಸ್ಪಧರ್ಿಸಿ ಗೆದ್ದು, ಫೆಬ್ರವರಿ 12 ರಿಂದ 16 ರವರೆಗೆ ಮಧ್ಯಪ್ರದೇಶದ ಭೋಪಾಲ್ ವಿ.ವಿ.ಯಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಜೀವನ್ ರಾಂ ಸುಳ್ಯರ ನಿದರ್ೇಶನದಲ್ಲಿ ಆಳ್ವಾಸ್ನ ನಾಟಕಗಳು ದಕ್ಷಿಣ ಭಾರತ ಯುವಜನೋತ್ಸವದಲ್ಲಿ ಪ್ರಶಸ್ತಿ ಪಡೆಯುವುದು ಇದು 8 ನೇ ಬಾರಿ. ಇದರಲ್ಲಿ ಈಗಾಗಲೇ ಸತತ 6 ಬಾರಿ ರಾಷ್ಟ್ರೀಯ ರಂಗ ಪ್ರಶಸ್ತಿಯನ್ನು ಪಡೆದಿರುವುದು ಒಂದು ದಾಖಲೆಯಾಗಿದೆ
