ಸುದ್ದಿ9ಮೂಡುಬಿದರೆ: ಎಸ್ಕೆಎಸ್ಎಸ್ಎಫ್ ಬೆಳ್ಳಿಹಬ್ಬ ಪ್ರಚಾರ ಸಮ್ಮೇಳನವು ಮಸ್ಜಿದುನ್ನೂರ್ ಲಾಡಿ ಸಮೀಪದ ಹಾಸ್ಕೋ ಗ್ರೌಂಡ್ನಲ್ಲಿ ಭಾನುವಾರ ಜರುಗಿತು.
ಮುಖ್ಯ ಪ್ರಭಾಷಣಕಾರರಾಗಿ ಎಸ್ಕೆಎಸ್ಸೆಸ್ಸೆಫ್ ಕೇಂದ್ರೀಯ ಸಮಿತಿ ಸದಸ್ಯ ಮಮ್ಮುಟ್ಟಿ ಮಾಸ್ಟರ್ ಅಹ್ಲ್ ಸುನ್ನತ್ ವಲ್, ಜಮಾಅತ್ ಸಮಸ್ತದ ಆದರ್ಶದ ಬಗ್ಗೆ ವಿವರವಾದ ಮಾಹಿತಿ ನೀಡಿ ಸತ್ಯದೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು. ಎಸ್ಕೆಎಸ್ಎಸ್ಎಫ್ ಬೆಳ್ಳಿಹಬ್ಬದ ಧ್ಯೇಯ ವಾಕ್ಯ `ನ್ಯಾಯ ಪ್ರಜ್ಞೆಯ ಪರ ಜಾಗೃತಿ’ ಬಗ್ಗೆ ಮಾತನಾಡಿದರು.
ದ.ಕ. ಸಮಸ್ತ ಪ್ರಧಾನ ಕಾರ್ಯದರ್ಶಿ ಮುಶಾವರ, ಆತ್ರಾಡಿ ಖಾಝಿ ಶೈಖುನಾ ವಿ.ಕೆ.ಅಬೂಬಕ್ಕರ್ ಮುಸ್ಲಿಯಾರ್ ದುಆ ನೆರವೇರಿಸಿದರು.
ಮೂಡುಬಿದರೆ ಟೌನ್ ಜುಮಾ ಮಸೀದಿಯ ಖತೀಬ ಅಲ್ಹಾಜ್ ಮೂಸಲ್ ಫೈಝಿ ಸಮ್ಮೇಳನ ಉದ್ಘಾಟಿಸಿದರು.ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ರೆಹಮಾನ ಅಧ್ಯಕ್ಷತೆ ವಹಿಸಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ಎಚ್.ಎಂ.ಅಬ್ದುಲ್ ಖಾದರ್ ಹಂಡೇಲು, ಎಸ್ಕೆಎಸ್ಎಸ್ಎಫ್ ಮೂಡುಬಿದರೆ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಅಝೀಝ್ ಮಾಲಿಕ್, ಜಿಲ್ಲಾ ಸ್ವಾಗತ ಸಮಿತಿಯ ಸಂಚಾಲಕ ಉಸ್ಮಾನ್ ಅಬ್ದುಲ್ಲಾ, ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಕೋಶಾಧಿಕಾರಿ ಹಾಜಿ ಶಾಹುಲ್ ಹಮೀದ್ ಮೆಟ್ರೋ, ಉಡುಪಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದಶರ್ಿ ಬಶೀರ್ ವಹಬಿ, ಸ್ವಾಗತ ಸಮಿತಿಯ ಉಪಾಧ್ಯಕ್ಷ ಯೂಸುಫ್ ಮಿಜಾರು, ಸ್ವಾಗತ ಸಮಿತಿಯ ಉಪಸಂಚಾಲಕ ಎಂ.ಎಫ್.ಎಂ. ಇಸ್ಮಾಯಿಲ್ ಜ್ಯೋತಿನಗರ, ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಯಮನಿ ತಿಂಗಳಾಡಿ, ಶಂಸುಲ್ ಉಲಾಮಾ ಅರೆಬಿಕ್ ಕಾಲೇಜು ನಿರ್ವಾಹಕ ಇಸ್ಹಾಕ್ ಹಾಜಿ, ತೋಡಾರು ಜುಮಾ ಮಸೀದಿ ಅಧ್ಯಕ್ಷ ಎಂ.ಎ.ಎಸ್.ಅಬೂಬಕ್ಕರ್, ಸುರಲ್ಪಾಡಿ ಖತೀಬರಾದ ಇಸ್ಮಾಯಿಲ್ ದಾರಿಮಿ, ಹಂಡೇಲು ಖತೀಬರಾದ ಅಬ್ದುಲ್ ಬಶೀರ್ ಯಮಾನಿ, ಪಡಂದಡ್ಕ ಖತೀಬರಾದ ಅಬ್ದುಲ್ ಹಮೀದ್ ದಾರಿಮಿ, ಗಂಟಾಲ್ಕಟ್ಟೆ ಖತೀಬರಾದ ಇಸ್ಮಾಯಿಲ್ ಫೈಝಿ, ಹೊಕ್ಕಾಡಿಗೋಳಿ ಖತೀಬರಾದ ಉಮರ್ ಮದನಿ, ಜ್ಯೋತಿನಗರ ಖತೀಬರಾದ ಮುಹಮ್ಮದ್ ರಫೀಕ್ ದಾರಿಮಿ, ಮಕ್ಕಿ ಖತೀಬರಾದ ಅಬ್ದುಲ್ ಲತೀಫ್ ಮದನಿ, ಪೆರಾಡಿ ಖತೀಬರಾದ ಹಮೀದ್ ಮುಸ್ಲಿಯಾರ್, ಗಂಟಾಲ್ಕಟ್ಟೆ ಅಧ್ಯಕ್ಷ ಮುಶ್ತಾಕ್ ಅಹ್ಮದ್, ಅಂಗರಕರ್ಯ ಜಮಾಅತ್ ಅಧ್ಯಕ್ಷ ನಝೀರ್ ಅಹ್ಮದ್, ಪಡಂದಡ್ಕ ಜಮಾಅತ್ ಅಧ್ಯಕ್ಷ ಮುಹಮ್ಮದ್, ಸಚ್ಚರಿಪೇಟೆ ಜಮಾಅತ್ ಅಧ್ಯಕ್ಷ ಶಾಬಾನ್, ಪೆರಾಡಿ ಜಮಾಅತ್ ಅಧ್ಯಕ್ಷ ಇದಿನಬ್ಬ, ಹೊಕ್ಕಾಡಿಗೋಳಿ ಜಮಾಅತ್ ಅಧ್ಯಕ್ಷ ನಾಸಿರುದ್ಧೀನ್, ಜ್ಯೋತಿನಗರ ಅಧ್ಯಕ್ಷ ಲಿಖಾಯತ್ ಅಲಿ, ಈದ್ಗಾ ಮದರಸದ ಅಧ್ಯಕ್ಷ ಅಬ್ದುಲ್ ಬಶೀರ್, ಕೋಟೆಬಾಗಿಲು ಮದರಸದ ಅಧ್ಯಕ್ಷ ಅಬ್ದುಲ್ಲಾ, ಪುತ್ತಿಗೆ ಮದರಸದ ಅಧ್ಯಕ್ಷ ಅಬ್ದುಲ್ಲಾ ಪುತ್ತಿಗೆ, ಮಾಪರ್ಾಡಿ ಮದರಸದ ಸದಸ್ಯ ಅಹ್ಮದ್ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಸಂಚಾಲಕ ಅಬ್ದುಲ್ ಲತೀಫ್ ಮದರ್ ಇಂಡಿಯಾ ಸ್ವಾಗತಿಸಿದರು. ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಮುಸ್ತಫಾ ಯಮಾನಿ ಶುಭಾಶಂಸನೆಗೈದರು. ಕೋಶಾಧಿಕಾರಿ ಉಸ್ಮಾನ್ ವಂದಿಸಿದರು.

18-12(3)

By suddi9

Leave a Reply

Your email address will not be published. Required fields are marked *