ಬಂಟ್ವಾಳ :-ಬಂಟ್ವಾಳ ತಾಲೂಕು ಭಜನಾ ಪರಿಷತ್ ಸಭೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಬಂಟ್ವಾಳ ಯೋಜನಾ ಕಚೇರಿಯ  ಉನ್ನತಿ ಸೌಧ ಸಭಾಂಗಣದಲ್ಲಿ   ನಡೆಯಿತು.                 
ಬಂಟ್ವಾಳ ತಾಲೂಕು ಭಜನಾ ಪರಿಷತ್ ಅಧ್ಯಕ್ಷ  ಮುರಳೀಧರ ಪೊಳಲಿ  ಸಭೆಯ ಅಧ್ಯಕ್ಷತೆ ವಹಿಸಿದ್ದರು.                                                   

ಯೋಜನೆಯ ಜಿಲ್ಲಾ ನಿರ್ದೇಶಕ  ದಿನೇಶ್ ಡಿ. ಅವರು ಸಭೆಯನ್ನು ಉದ್ಘಾಟಿಸಿ  ನಮ್ಮ ಆಚಾರ,ಸಂಸ್ಕಾರ  ಉಳಿಸಿ ಬೆಳೆಸುವಲ್ಲಿ ಭಜನೆ ಮಹತ್ತರ ಪಾತ್ರ ವಹಿಸಿದೆ  ಎಂದರು.     

ಜಿಲ್ಲಾ ಭಜನಾ ಪರಿಷತ್ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು  ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟ ಹಾಗೂ ಭಜನೋತ್ಸವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.             
  ಭಜನಾ ಕಮ್ಮಟದ ತರಬೇತಿದಾರ ಸಂದೇಶ್ ಮದ್ದಡ್ಕ  ಬಂಟ್ವಾಳ ತಾಲೂಕಿನ ಭಜನಾ ಮಂಡಳಿಗಳು ನಡೆಸುವ ಕುಣಿತ ಭಜನಾ  ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  
ಸಭೆಯಲ್ಲಿ  ತಾಲೂಕಿನ ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.                     
  ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ  ಜಯಾನಂದ ಪಿ. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ತಾಲೂಕಿನ ವಿಚಕ್ಷಣಾಧಿಕಾರಿ ಸುಬ್ರಾಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *