ಬಂಟ್ವಾಳ: ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘವು ಉತ್ತಮ ವ್ಯವಹಾರ ನಡೆಸಿ ಮಾಡಿರುವ ಸಾಧನೆಗಾಗಿದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷರಾದ ಕೆ ಸಂಜೀವ ಪೂಜಾರಿ ಹಾಗೂ ಮುಖ್ಯಕಾರ್ಯನಿರ್ವಹನಾಧಿಕಾರಿ ಮಮತಾ ಜಿ ಪ್ರಶಸ್ತಿ ಸ್ವೀಕರಿಸಿದರು

ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ ಎನ್ ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿದರು ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ ಆಡಳಿತ ಮಂಡಳಿ ಸದಸ್ಯರಾದ ಭಾಸ್ಕರ್ ಎಸ್ ಕೋಟ್ಯಾನ್, ಶಶಿಕುಮಾರ್ ರೈ ಬಿ,ಡಾ ದೇವಿಪ್ರಸಾದ್ ಶೆಟ್ಟಿ, ಸದಾಶಿವ ಉಳ್ಳಾಲ್,ಎಂ ಮಹೇಶ್ ಹೆಗ್ಡೆ,ಎಸ್ ಎನ್ ಮನ್ಮಥ ಹಾಗೂ ಸಹಕಾರ ಸಂಘಗಳ ಉಪನಿಬoದಕರಾದ ಎಚ್ ಎನ್ ರಮೇಶ್ ಉಪಸ್ಥಿತರಿದ್ದರು.
ದ ಕ ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಸಿ ಇ ಒ ಕಿಶೋರ್ ಹಾಗೂ ಸಂಘದ ಲೆಕ್ಕಿಗ ನಿಶ್ಮಿತಾ ಕೆ, ಶಾಖಾ ವ್ಯವಸ್ಥಾಪಕರಾದ ಅಕ್ಷತಾ ಹಾಗೂ ಕು.ಶ್ರುತಿ ಅವರು ಪಾಲ್ಗೊಂಡಿದ್ದರು.
