ಬಂಟ್ವಾಳ: ಸಂಸ್ಕಾರಯುಕ್ತ ಜೀವನ ಕಲಿಸಲು ಹಾಗೂ ಗ್ರಾಮ ವ್ಯಾಪ್ತಿಯ ಜನರ ಕಷ್ಟ ಸುಖ ಅರಿಯಲು ಸುರಕ್ಷಾ ಸಂಗಮ (ರಿ.)ಪೂರ್ಲಿಪಾಡಿ  ಮಾಡುವ ಕಾರ್ಯಕ್ರಮಗಳು ಮಾದರಿಯಾಗಿದೆ ಎಂದು  ಬಿ.ಜೆ.ಪಿ ಯುವ ಮುಖಂಡ,ಉದ್ಯಮಿ ಸಂದೇಶ್ ಶೆಟ್ಟಿ ಅರೆಬೆಟ್ಟು  ಹೇಳಿದರು.                   

ಸುರಕ್ಷಾ ಸಂಗಮ (ರಿ.)ಪುರ್ಲಿಪಾಡಿ, ಕಲ್ಲಡ್ಕ ಇದರ ಆಶ್ರಯದಲ್ಲಿ ಭಾನುವಾರ ಕಲ್ಲಡ್ಕ ಸಮೀಪದ ಪೂರ್ಲಿಪಾಡಿಯ ಮರಾಠಿ ಭವನದಲ್ಲಿ ನಡೆದ  “ಗೌಜಿ ಗಮ್ಮತ್-  2026 “ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಯಪ್ರಶಾಂತ್ ವಹಿಸಿದ್ದರು.                     

 ಈ ಸಂದರ್ಭದಲ್ಲಿ ದೈವ ಚಾಕರಿದಾರ ಯೋಗೀಶ್ ಸುವರ್ಣ, ಗ್ರಾಮ ಗೌರವಕ್ಕೆ ಪಾತ್ರರಾದ ನಾಗರತ್ನ ಪೂರ್ಲಿಪಾಡಿ, 25 ಬಾರಿ ರಕ್ತದಾನ ಮಾಡಿದ ರಾಜೇಶ್ ಬಿ ಆರ್ ನಗರ ಅವರನ್ನು ಸನ್ಮಾನಿಸಲಾಯಿತು.
ಅದೇರೀತಿ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಸಾಧನೆಗೈದ  ವಿದ್ಯಾರ್ಥಿಗಳನ್ನು  ಅಭಿನಂದಿಸಲಾಯಿತು.               ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಬಿಜೆಪಿ ಬಂಟ್ವಾಳ ಮಂಡಲದ  ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಹೊಸಕಟ್ಟ  ಕನ್ ಸ್ಟಕ್ಷನ್ ಮಾಲಕ ಚಿತ್ರಂಜನ್ ಹೊಸಕಟ್ಟ, ಕೃಷಿಕ ಜಯನಂದ ಏಳ್ತಿಮಾರು, ವಿಟ್ಲ ಆರ್ ಕೆ ಡ್ಯಾನ್ಸ್ ಅಕಾಡೆಮಿಯ ರಾಜೇಶ್ ವಿಟ್ಲ, ಪ್ರಗತಿಪರ ಕೃಷಿಕ ಜನಾರ್ಧನ ಪೂಜಾರಿ ಗೋಳಿಮಾರ್, ಕೆ ಎಸ್ ಬೇಕರಿ ಮಾಲೀಕ ನವಾಜ್, ಕನ್ನಡ ಶಾರದಾ ಪೂಜಾ ಸಮಿತಿ ಅಧ್ಯಕ್ಷ  ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.             
   ಆರಾಧ್ಯ ಪ್ರಾರ್ಥಿಸಿ, ಸಂಘದ ಗೌರವ ಸಲಹೆಗಾರ  ಯತಿನ್ ಕುಮಾರ್ ಏಳ್ತಿಮಾರ್ ಸ್ವಾಗತಿಸಿದರು.ಇನ್ನೊರ್ವ ಗೌರವ ಸಲಹೆಗಾರ ವೆಂಕಟ್ರಾಯ ಪ್ರಭು ಪ್ರಸ್ತಾವನೆಗೈದರು, ಸುರಕ್ಷಾ ಮಹಿಳಾ ಮಂಡಳಿಯ ಅಧ್ಯಕ್ಷ ಉಮಾವತಿ ವಂದಿಸಿದರು.ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *