ಬಂಟ್ವಾಳ: ವಿದ್ಯುತ್ ಟ್ರಾನ್ಸ್‌ಫಾರ್ಮ‌ರ್ ಮೇಲೆ ಹತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಅವಿವಾಹಿತ ಎಲೆಕ್ನಿಷಿಯನ್ ವೋರ್ವರು‌ ಮೃತಪಟ್ಟಿರುವ ಘಟನೆ ಕರಿಯಂಗಳ ಗ್ರಾಮದ ತಂತ್ರಿಬೆಟ್ಟು ಎಂಬಲ್ಲಿ  ನಡೆದಿದೆ.


ಮೃತರನ್ನು ಕರಿಯಂಗಳ ಗ್ರಾಮದ ತಂತ್ರಿಬೆಟ್ಟು ನಿವಾಸಿ ಹರೀಶ್ ಟಿ. (38) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ಎಲೆಕ್ನಿಷಿಯನ್ ಆಗಿದ್ದು, ಅವಿವಾಹಿತರು ಕೂಡ ಆಗಿದ್ದಾರೆನ್ನಲಾಗಿದೆ.


ಆ.16 ರಂದು ಹರೀಶ್ ಅವರು  ರಾತ್ರಿ  8 ಗಂಟೆ ಸುಮಾರಿಗೆ ಮನೆಗೆ ಬಂದು ಊಟ ಮಾಡಿ ಮಲಗಿದ್ದರು. ಆ.17ರಂದು ಬೆಳಗ್ಗೆ 7 ಗಂಟೆಗೆ ಮನೆಮಂದಿ  ನೋಡಿದಾಗ ಅವರು ಮನೆಯಲ್ಲಿರಲಿಲ್ಲ ಎನ್ನಲಾಗಿದೆ.


ಬೆಳಗ್ಗೆ 7.30ರ ಸುಮಾರಿಗೆ ಸ್ಥಳೀಯರೋರ್ವರು  ಮನೆಮಂದಿಗೆ ಕರೆ ಮಾಡಿ, ತಂತ್ರಿಬೆಟ್ಟು ಟ್ರಾನ್ಸ್ ಫಾರ್ಮರ್ ಬಳಿ ಹರೀಶ್ ಅವರ ಬೈಕ್  ಕಂಡುಬಂದಿದ್ದು,ಮತ್ತು ಅವರು ಅಲ್ಲಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದಾರೆನ್ನಲಾಗಿದೆ.  
ಕೂಡಲೇ ಸ್ಥಳಕ್ಕೆ ತೆರಳಿದ ಮನೆ ಮಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ  ಹರೀಶ್‌  ಟ್ರಾನ್ಸ್‌ಫಾರ್ಮ‌ರ್  ಕೆಳಭಾಗದಲ್ಲಿ ಬಿದ್ದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.


ಈ ಅವಘಡ ಹೇಗೆ ಸಂಭವಿಸಿದೆ ಎಂಬುದು ತನಿಖೆಯಿಂದಷ್ಠೆ  ತಿಳಿದುಬರಬೇಕಿದೆ.
ಮೃತರ ಸಹೋದರ  ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

By Suddi9

Leave a Reply

Your email address will not be published. Required fields are marked *