ಬಂಟ್ವಾಳ: ಸ್ವಾತಂತ್ರ್ಯೋತ್ಸವ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ನಲ್ಕೆಮಾರ್ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ನಿವೃತ್ತ ಸೈನಿಕ ಡಿಕೇಶ್ ಮತ್ತು ಪ್ರಗತಿಪರ ಕೃಷಿಕ ಮಾರ್ಕ್ ಬರೆಟೊ ಅಮ್ಟಾಡಿ ಅವರನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕದಿಂದ ಸನ್ಮಾನಿಸಲಾಯಿತು.

ಲೀಜನ್ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಸನ್ಮಾನಿಸಿ ಮಾತನಾಡಿದರು.ಕೃಷಿಕರು ಮತ್ತು ಸೈನಿಕರು ದೇಶದ ಬೆನ್ನೆಲುಬು. ಅವರ ಸೇವೆಗೆ ಸಮಾಜ ಋಣಿಯಾಗಿದ್ದು ಆಗಾಗ ಸ್ಮರಿಸಬೇಕೆಂದರು .ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಕುಮಾರಿ ಶುಭಹಾರೈಸಿದರು.
ಸ್ಥಾಪಕಾಧ್ಯಕ್ಷ ಜಯಾನಂದ ಪೆರಾಜೆ,ಮಾಜಿ ಉಪಾಧ್ಯಕ್ಷ ಸತ್ಯನಾರಾಯಣ ರಾವ್, ಉಪಾಧ್ಯಕ್ಷ ಜಯ್ ಗಣೇಶ್, ಕೋಶಾಧಿಕಾರಿ ಪಿ.ಮಹಮ್ಮದ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರೇಖಾರಾವ್ ಜೊತೆ ಕಾರ್ಯದರ್ಶಿ ಸನ್ಮತಿ ಜೈನ್ ಅಭಿನಂದನಾ ಭಾಷಣ ಮಾಡಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು.
