ಬಂಟ್ವಾಳ: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಜಾನಕಿ ದರ್ಖಾಸು ಪೆರ್ನೆ ಅವರ ಮನೆಯಲ್ಲಿ ಆಯೋಜಿಸಲಾದ “ಆಟಿ ಸಿರಿ ಸಂಭ್ರಮ – 2026” ಕಾರ್ಯಕ್ರಮವು ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಸಾಂಪ್ರದಾಯಿಕ ಆಟಗಳ ಸೊಗಡಿನೊಂದಿಗೆ ಸಂಭ್ರಮದಿಂದ ನಡೆಯಿತು.

ಬಿಳಿಯೂರು ಪೆರ್ನೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಚಂದಪ್ಪ ಪೂಜಾರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಆಟಿ ತಿಂಗಳು ತುಳುನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕವಾಗಿಧ ಈ ನಿಟ್ಟಿನಲ್ಲಿ ಯುವವಾಹಿನಿ ಮಾಣಿ ಘಟಕದ ‘ಆಟಿ ಸಿರಿ ಸಂಭ್ರಮ’ ಅರ್ಥಪೂರ್ಣ ಕಾರ್ಯಕ್ರಮವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಪೂಜಾರಿ ಕೊಡಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಾನಕಿ ದರ್ಕಾಸು ಪೆರ್ನೆ, ನವೀನ್ ಕುಮಾರ್ ಪದಬರಿ ಹಾಗೂ ಉಮೇಶ್ ಬಾಕಿಮಾರು ಉಪಸ್ಥಿತರಿದ್ದರು.ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಸ್ವಾಗತಿಸಿದರು. ಕುಮಾರಿ ಸ್ವಾತಿ ವಂದಿಸಿದರು.
ಬಳಿಕ ಆಟಿ ಕೂಟದ ಸ್ಪರ್ಧೋತ್ಸವ ನಡೆಯಿತು. ಚೆನ್ನಮನೆ ಆಟ, ತೆಂಗಿನಕಾಯಿ ಕುಟ್ಟುವ ಸ್ಪರ್ಧೆ, ನಿಧಿ ಶೋಧ, ಅಡುಗೆ ತಯಾರಿಕೆ, ಮಕ್ಕಳ ವಿವಿಧ ಆಟಗಳು ಹಿಡಿಸುಡಿ ತಟ್ಟಿ ಹೆಣೆಯುವುದು ನಿಧಿ ಶೋಧ ರೀಲ್ಸ್ ಸ್ಪರ್ಧೆ ಮಾಜಿ ಅಧ್ಯಕ್ಷರಿಗೆ ವಿಭಿನ್ನ ಸ್ಪರ್ಧೆ ಹೀಗೆ ಹಲವು ಸಾಂಪ್ರದಾಯಿಕ ಮತ್ತು ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಊರಿನ ಹಿರಿಯರು, ಯುವಕರು, ಮಕ್ಕಳು ಹಾಗೂ ಯುವವಾಹಿನಿಯ ಸದಸ್ಯರು ಪಾಲ್ಗೊಂಡರು.
ಸಾಂಪ್ರದಾಯಿಕ ಆಟಗಳ ಮೂಲಕ ಹಿರಿಯರು ತಮ್ಮ ಬಾಲ್ಯದ ಸವಿನೆನಪುಗಳನ್ನು ಮೆಲುಕು ಹಾಕಿದರೆ, ಮಕ್ಕಳು ಮತ್ತು ಯುವಕರು ಹಿಂದಿನ ಕಾಲದ ಆಟಗಳ ಪರಿಚಯ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ತನಿಯಪ್ಪ ಪೂಜಾರಿ ಅವರು “ಆಟಿ ಸೊಗಡು – ಮಾತಿನ ಸೊಗಡು” ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಆತಿಥ್ಯ ನೀಡಿ ಸಹಕರಿಸಿದ ಜಾನಕಿ ದರ್ಕಾಸು ಪೆರ್ನೆ ಅವರನ್ನು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಪೂಜಾರಿ ಕೊಡಾಜೆ ವಹಿಸಿದ್ದರು.ಕೇಶವ ಪೂಜಾರಿ ಸುಣ್ಣಾನ ನಾರಾಯಣ ಸಾಲ್ಯಾನ್ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪುಮಮಣಿ ಯುವ ವಾಹಿನಿ ಘಟಕದ ಸಲಹೆಗಾರರಾದ ಲೋಕನಾಥ ತಿಮ್ಮರಾಜೆ,ಕಾರ್ಯಕ್ರಮದ ಸಂಚಾಲಕರಾದ ವಿಕ್ರಂ ಬಿಳಿಯೂರು, ಶುಭಾ ಪೆರ್ನೆ ಅಮಿತಾ ಪರ್ನೆ ಉಪಸ್ಥಿತರಿದ್ದರು.
ಕಾರ್ಯದರ್ಶಿ ವಿಶ್ವನಾಥ ಪೂಜಾರಿ ವಂದಿಸಿದರು,ರಾಜೇಶ್ ಪಲ್ಯ ಪ್ರಜ್ಞಾ ಭವಿಷ್ಯ ಕಾರ್ಯಕ್ರಮವನ್ನು ನಿರೂಪಿಸಿದರು.
