ಬಂಟ್ವಾಳ : ಆಟಿ ಕೂಟವು ಕೇವಲ ಸಾಂಪ್ರದಾಯಿಕ ಆಚರಣೆಯಲ್ಲ, ಇದು ಬಂಟ ಸಮುದಾಯದ ಸಂಸ್ಕೃತಿ, ಪರಂಪರೆ, ಕೌಟುಂಬಿಕ ಬಾಂಧವ್ಯ, ಸಾಮಾಜಿಕ ಚಿಂತನೆಯನ್ನು ಗಟ್ಟಿಗೊಳಿಸುವ ಜೀವಂತ ವೇದಿಕೆ. ಪಾರಂಪರಿಕ ಆಚರಣೆಗಳು ಸಹಕಾರ ಮತ್ತು ಸಹಬಾಳ್ವೆಯ ಬದುಕನ್ನು ಉತ್ತೇಜಿಸಿ, ಒಂದೇ ಕುಟುಂಬದಂತೆ ಬದುಕುವ
ಶಕ್ತಿಯನ್ನು ಹೊಂದಿದೆ ಎಂದು ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ
ಅಭಿಪ್ರಾಯ ಪಟ್ಟಿದ್ದಾರೆ.

ಕಾವಳಕಟ್ಟೆ ವಲಯ ಬಂಟರ ಸಂಘದ ವತಿಯಿಂದ ಕೆದ್ದಳಿಕೆಯ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಆಟಿದ ಕೂಟ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಭೆಯನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿ. ಇಂದು ಪುರಸ್ಕಾರ ಪಡೆದ ವಿದ್ಯಾರ್ಥಿಗಳೇ ಈ ಸಮಾಜದ ನಾಳಿನ ನಾಯಕರು. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಸಮಾಜ ಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಜೀವನ ಸಾರ್ಥಕವೆನಿಸುತ್ತದೆ. ವಲಯದ ಬಂಟರ ಸಂಘವು ಶಿಕ್ಷಣ ಮತ್ತು ಸಂಸ್ಕೃತಿಗೆ ನಿರಂತರ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಿರುವುದು ಶ್ಲಾಘನೀಯವಾಗಿದ್ದು, ಇತರೆ ಸಂಘ ಸಂಸ್ಥೆಗಳಿಗೂ ಇದು ಮಾದರಿಯಾಗಿದೆ ಎಂದರು.

ವಲಯದ ಹಿರಿಯ ದಂಪತಿಗಳಾದ ವೇದಾವತಿ ಹಾಗೂ ಲೋಕಯ್ಯ ಶೆಟ್ಟಿ ಕಜೆಕೋಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶುಚಿ ರೈ ಹಾಗೂ ಪ್ರಮೋದ್ ಕುಮಾರ್ ರೈ ಸಂಪ್ರದಾಯಿಕ ಪ್ರತೀಕವಾದ ಚೆನ್ನೆಮಣೆ ಹಾಗೂ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಅಭ್ಯಾಗತರಾಗಿದ್ದ ಅಡ್ವೆಂಚರ್ ಪಿ.ಯು ಕಾಲೇಜಿನ ಅಧ್ಯಕ್ಷ ಅಮೃತ್ ರೈ ಮಾತನಾಡಿದರು.
ತಾಲೂಕು ಬಂಟರ ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಲ, ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಗೋವಿಂದಾಸ್ ಕಾಲೇಜಿನ ಉಪನ್ಯಾಸಕಿ, ಎನ್ಸಿಸಿ ಮೇಜರ್ ಡಾ. ಸುಧಾ ಚಂದ್ರಶೇಖರ್ ಶೆಟ್ಟಿ, ತಾಲೂಕು ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ಪಿ. ರೈ, ವಾಮದಪದವು ವಲಯದ ಅಧ್ಯಕ್ಷ ವಸಂತ್ ಶೆಟ್ಟಿ ಕೇದಗೆ, ಸರಪಾಡಿ ವಲಯದ ಅಧ್ಯಕ್ಷ ದಯಾನಂದ್ ಶೆಟ್ಟಿ, ಶ್ರೀ ದುರ್ಗಾ ಯಾತ್ರಿ ನಿವಾಸದ ಮಾಲಕರಾದ ಪ್ರಕಾಶ್ ಶೆಟ್ಟಿ, ಪ್ರಗತಿಪರ ಕೃಷಿಕ ಸದಾಶಿವ ಶೆಟ್ಟಿ ಕೈಮಾರು, ನಾರಾಯಣ ಶೆಟ್ಟಿ ಕುಮಂಗಿಲ, ಉದ್ಯಮಿ ಬಾಲಕೃಷ್ಣ ಶೆಟ್ಟಿ ಇರ್ವತ್ತೂರು, ಸೀತಾರಾಮ್ ಶೆಟ್ಟಿ ಪೆರುವಾರು, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರೋಷನ್ ಶೆಟ್ಟಿ ದೋಟ, ಇರ್ವತ್ತೂರು ಗ್ರಾಮ ಪಂಚಾಯತ್ನ ಮಾಜಿ ಉಪಾಧ್ಯಕ್ಷ ಶಂಕರ್ ಶೆಟ್ಟಿ ಬೆದ್ರುಮಾರು, ಕಾವಳಕಟ್ಟೆ ವಲಯದ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಬಿಯಂತಬೆಟ್ಟು, ಚಂದ್ರಶೇಖರ್ ಶೆಟ್ಟಿ ಪುಳಿಮಜಲು, ಕೋಶಾಧಿಕಾರಿ ಚಂದ್ರಶೇಖರ್ ಶೆಟ್ಟಿ ಪಣೆಕಲ, ಯುವ ವಿಭಾಗದ ಅಧ್ಯಕ್ಷ ಕಿಶೋರ್ ರೈ ಕಾಡಬೆಟ್ಟು ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ
ಕಳೆದ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲೀಲಾವತಿ ಶೆಟ್ಟಿ ಹಾಗೂ ಸದಾಶಿವ ಶೆಟ್ಟಿ ದಂಪತಿ ತಮ್ಮ ವಿವಾಹದ ಸುವರ್ಣ ಮಹೋತ್ಸವದ ಪ್ರಯುಕ್ತ ಪ್ರತಿಭಾ ಪ್ರತಿಭಾ ಪುರಸ್ಕಾರವನ್ನಿತ್ತು ಅಬನಿನಂದಿಸಲಾಯಿತು. ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಇದೇ ವೇಳೆ ಕೆದ್ದಳಿಕೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ಬಂಟರ ಸಂಘ ಕಾವಳಕಟ್ಟೆ ವಲಯದಿಂದ ನಾಲ್ಕು ಫ್ಯಾನ್ ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರ ಮಾಡಲಾಯಿತು.
ವಿದೂಷಿ ಸಹನಾ ಎಂ. ಶೆಟ್ಟಿಗೆ ಸನ್ಮಾನ :
ಭರತನಾಟ್ಯ ಮತ್ತು ಕರಾಟೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದು ಇತ್ತೀಚೆಗೆ ವಿದೂಷಿ ಪದವಿ ಪಡೆದು ರಂಗಪ್ರವೇಶ ಮಾಡಿದಕುಮಾರಿ ಸಹನಾ ಎಂ. ಶೆಟ್ಟಿ ನರ್ವಲ್ದಡ್ಡ ಇವರನ್ನು ಕಾವಳಕಟ್ಟೆ ವಲಯ ಬಂಟರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
