ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  ಕಲ್ಲಡ್ಕ ವಲಯದ ಜನಜಾಗೃತಿ ವೇದಿಕೆ, ಭಜನಾ ಪರಿಷತ್ ಹಾಗೂ ಒಕ್ಕೂಟದ ಪದಾಧಿಕಾರಿಗಳ  ಜಂಟಿ ಸಭೆ ರವಿವಾರ ಕಲ್ಲಡ್ಕ ನೇತಾಜಿ ಸಭಾಭವನದಲ್ಲಿ  ಜರಗಿತು.  ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಸುಖರಾಜ್,  ಬಜನಾ ಪರಿಷತ್ ಅಧ್ಯಕ್ಷ  ಜಯರಾಮ್ ರೈ, ಜನಜಾಗೃತಿ ವೇದಿಕೆ ಅಧ್ಯಕ್ಷ ಭಟ್ಯಪ್ಪ ಶೆಟ್ಟಿ, ಒಕ್ಕೂಟಗಳ ವಲಯ ಅಧ್ಯಕ್ಷ ತುಳಸಿ ರವರ   ಉಪಸ್ಥಿತಿಯಲ್ಲಿ ಕಲ್ಲಡ್ಕ ವಲಯ ಜನಜಾಗೃತಿ ವೇದಿಕೆ ಹಾಗೂ  ಪ್ರಗತಿ ಬಂದು ಸ್ವಸಹಾಯ  ಸಂಘಗಳ ಒಕ್ಕೂಟಗಳ ವಲಯದ ನೂತನಅಧ್ಯಕ್ಷರ ಆಯ್ಕೆ ಮಾಡಲಾಯಿತು.
 
 
ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ  ವೆಂಕಟರಾಯ ಪ್ರಭು,  ಒಕ್ಕೂಟಗಳ ನೂತನ ವಲಯ ಅಧ್ಯಕ್ಷರಾಗಿ  ಚಿದಾನಂದ ಕಲ್ಲಡ್ಕ  ಆಯ್ಕೆಯಾದರು.
 ಸಭೆಯಲ್ಲಿ ವಲಯದ ಎಲ್ಲಾ ಒಕ್ಕೂಟಗಳ ಅಧ್ಯಕ್ಷರುಗಳು,ಪದಾಧಿಕಾರಿಗಳು,  ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದು, ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳು  ಕುರಿತು ಚರ್ಚಿಸಲಾಯಿತು.
 ಒಕ್ಕೂಟ ಸೇವಾಪ್ರತಿನಿಧಿಗಳಾದ  ವಿದ್ಯಾ ಹಾಗೂ ಅಶ್ವಿನಿ ಸಹಕರಿಸಿದರು.

By Suddi9

Leave a Reply

Your email address will not be published. Required fields are marked *