ಪೊಳಲಿ: ಬ್ಯಾಂಕ್‌ ಆಫ್‌ ಬರೋಡಾವು ತನ್ನೆಲ್ಲಾ ಶಾಖೆಗಳಲ್ಲಿ 119ನೇ ದಿನವನ್ನಾಗಿ ಅಚಾರಿಸುತ್ತಿದ್ದು ಪೊಳಲಿಯಲ್ಲಿ ಸಂಸ್ಥಾಪಕರ ದಿನವನ್ನು 20ರಂದು ಸೋಮವಾರ ಆಚರಿಸಲಾಯಿತು. 

ಉದ್ಯಮಿಗಳಾದ ಜಯರಾಮಕೃಷ್ಣ ಪೊಳಲಿ, ಯಶವಂತ ಪೂಜಾರಿ ಪೊಳಲಿ, ಶ್ರೀ ಕ್ಷೇತ್ರ ಪೊಳಲಿಯ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್‌ , ನಾಗೇಶ್‌ ರಾವ್‌, ಸಹರಾ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ ಪ್ರಿನ್ಸಿಪಾಲ್‌ ಕೇಶವ ಎಚ್,ಇಗ್ನೇಷೀಯಸ್ ಕುಟಿನ್ನೊ‌, ಮಹಮ್ಮದ್‌ ಎಚ್‌ , ಶ್ರೀಕಾಂತ್‌ ಭಟ್ ದೀಪ ಬೆಳಗಿಸಿ ಶುಭಹಾರೈಸಿದರು.‌ 

ಬ್ಯಾಂಕ್‌ ಆಫ್‌ ಬರೋಡಾ ೧೧೯ನೇ ಸ್ಥಾಪನಾ ದಿನಾಚರಣೆಯ್ನು   ಶಾಖೆಯ ವಿಶೇಷ ಪೂಜಾ ಸಂಭ್ರಮದೊಂದಿಗೆ ನಂಬಿಕೆ, ಪರಿಶ್ರಮ ಮತ್ತು ಪರಂಪರೆಯ ಸಂಕೇತವಾಗಿರುವ ಹಣಕಾಸಿನ ವ್ಯವಹಾರವಷ್ಟೇ ಅಲ್ಲದೆ, ಗ್ರಾಹಕರ ಸೇವೆಗಾಗಿ ಶ್ರಮಿಸುವ ಸಿಬ್ಬಂದಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರರಾಗಿದ್ದಾರೆ.

ಬ್ಯಾಂಕಿನ ಮುಂದಿನ ಯಶಸ್ಸಿಗಾಗಿ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಶಕ್ತಿಗಾಗಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬ್ಯಾಂಕಿನ ಸೀನೀಯರ್‌‌ ಮ್ಯಾನೆಜರ್ ಪಿ. ಆರ್.ರಾವ್‌ ಸಿಬ್ಬಂದಿಗಳ ಸಹಕಾರದೊಂದಿಗೆ ಗ್ರಾಹಕರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಬ್ಯಾಂಕ್‌ ಆಫ್‌ ಬರೋಡಾದ ಶ್ರೀಮತಿ ಅಂಜನಾ , ಅಕ್ಷಯ್‌ ಕುಮಾರ್‌ ಕೋಟ್ಯಾನ್,ಜೀವನ್‌ದಾಸ್‌, ಗೌತಮ್‌ ಐಶ್ವರ್ಯ ,,ರೋಹಿಣಿ, ದೀಪಿಕಾ, ಸುಧೀರ್‌ ಸೀತಾರಾಮ ಇದ್ದರು.

By Suddi9

Leave a Reply

Your email address will not be published. Required fields are marked *