ಬಂಟ್ವಾಳ: ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಾಬ್ದಿ ವರ್ಷವನ್ನು ಪೂರೈಸಿ ಮುಂದುವರಿಯುತ್ತಿರುವ ಪ್ರಯುಕ್ತ ಕಲ್ಲಡ್ಕ ಶ್ರೀ ರಾಮ ಪದವಿಪೂರ್ವ ವಿದ್ಯಾಲಯದಲ್ಲಿ ಸನಾತನಾ ಈ ಚೇತನಾ ಶೀರ್ಷಿಕೆ ಯಲ್ಲಿ ಕೆ ಮಹೇಂದ್ರ ನಾಥ್ ಸಾಲೆತ್ತೂರು ಅವರ ಸಾಹಿತ್ಯ ದ ಚಂದ್ರಶೇಖರ ಆಚಾರ್ಯ ಕಲ್ಲಡ್ಕ ಅವರ ಹಾಡಿನ ದ್ವನಿ ಮತ್ತು ದೃಶ್ಯ ಬಿಡುಗಡೆಯ ಕಾರ್ಯಕ್ರಮ ನಡೆಯಿತು. ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು
ಹಾಡಿನ ದ್ವನಿ ಮತ್ತು ದೃಶ್ಯ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಶ್ರೀ ರಾಮ ವಿದ್ಯಾ ಕೇಂದ್ರದ ಸಂಚಾಲಕರಾದ ವಸಂತ ಮಾಧವ ಅವರು ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿದ್ದರು. ಗೀತರಚನಾಕಾರರಾದ ಮಹೇಂದ್ರ ನಾಥ್ ಸಾಲೆತ್ತೂರು ಮತ್ತು ಕಿರು ಚಿತ್ರದಲ್ಲಿ ಸಹಕರಿಸಿದ ಕಲಾವಿದರು, ತಂತ್ರಜ್ಞ ರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಚಂದ್ರಶೇಖರ ಆಚಾರ್ಯ, ಮಹೇಂದ್ರನಾಥ್ ಸಾಲೆತ್ತೂರು,ಡಾ.ಕಮಲಾ ಪ್ರಭಾಕರ ಭಟ್ , ಪದವಿ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣ ಪ್ರಸಾದ್, ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ವಸಂತ ಬಲ್ಲಾಳ್ ಉಪಸ್ಥಿತರಿದ್ದರು.
ವಿದ್ಯಾ ಕೇಂದ್ರದ ಕಾರ್ಯ ನಿರ್ವಹಣಾಧಿಕಾರಿ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣ ಪ್ರಸಾದ್ ಅವರು ಸ್ವಾಗತಿಸಿದರು, ಗಾಯಕರಾದ ಚಂದ್ರ ಶೇಖರ ಆಚಾರ್ಯ ವಂದಿಸಿದರು,ಉಪನ್ಯಾಸಕರಾದ ಅಶೋಕ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
