ಬಂಟ್ವಾಳ: ಬಿ ಸಿ  ರೋಡ್ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕಕ್ಕೆಪದವಿನ ಯುವತಿ ಲಾವಣ್ಯ ಗೌಡ ಹತ್ಯೆಯನ್ನು ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ತಕ್ಷ ಬೇಬಿ ಕುಂದರ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕೃತ್ಯದಿಂದಾಗಿ ಜಿಲ್ಲೆಯ ಜನತೆ ಭಯಭೀತ ರಾಗಿದ್ದು ಹಾಡು ಹಗಲೇ ಯವತಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಕ್ರೂರಿ ಚೇತನ್ ಗೌಡ ಈ ಭೂಮಿಯಲ್ಲಿ ಜೀವಂತ ಬದುಕಲು ಅರ್ಹತೆ ಯನ್ನು ಹೊಂದಿಲ್ಲ,ಆತನಿಗೆ ಪೊಲೀಸ್ ಅಧಿಕಾರಿಗಳು ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಮನದು ಹಿರಿಯ ಪೊಲೀಸ್ ಅಧಿಕಾರಿಯನ್ನು ಪ್ರಕಟಣೆಯ ಒತ್ತಾಯಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ನೀಡುವ ಈ ಸಂದೇಶ   ಜನತೆಗೆ ಪೊಲೀಸ್ ಅಧಿಕಾರಿಗಳ ಮೇಲಿನ ವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಸಾರ್ವಜನಿಕರಿಗೂ ಧೈರ್ಯ ತುಂಬುವ ಕಾರ್ಯವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹೆಣ್ಣು ಮಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾವಿನ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ

By Suddi9

Leave a Reply

Your email address will not be published. Required fields are marked *