ಬಂಟ್ವಾಳ: ಇಲ್ಲಿನ ಕಕ್ಕೆಪದವು ನಿವಾಸಿ ಯುವತಿಲಾವಣ್ಯ ಹತ್ಯಾ ಆರೋಪಿ ಚೇತನ್ ಪರವಾಗಿ ವಕಾಲತ್ತು ವಹಿಸದಂತೆ  ವಿಶ್ವ ಹಿಂದೂ ಪರಿಷದ್, ಬಜರಂಗದಳ ಬಂಟ್ವಾಳ ಪ್ರಖಂಡದ ಪ್ರಮುಖರು ಬಂಟ್ವಾಳ ವಕೀಲರ ಸಂಘಕ್ಕೆ ಮನವಿ ಸಲ್ಲಿಸಿದ್ದಾರೆ.

ಬಿ.ಸಿ.ರೋಡ್ ನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಹಾಡುಹಗಲೇ ಲಾವಣ್ಯ ಎಂಬ ಅಮಾಯಕ ಯುವತಿಯನ್ನು ಬರ್ಬರವಾಗಿ ಹತ್ಯೆಗೈದಿರುವುದು ಅತ್ಯಂತ ಹೇಯ ಕೃತ್ಯವಾಗಿದ್ದು,ಇಡೀ ಸಮಾಜ ತಲೆತಗ್ಗಿಸುವಂತಾಗಿದೆ.ಇಂತಹ  ರಾಕ್ಷಸ ಮಾನಸಿಕತೆಯ ಆರೋಪಿ ಚೇತನ್ ಎಂಬಾತನ ಪರವಾಗಿ  ನ್ಯಾಯವಾದಿಗಳು ವಕಾಲತ್ತು ವಹಿಸದಂತೆ ಬಂಟ್ವಾಳ ವಕೀಲರ ಸಂಘಕ್ಕೆ  ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ಮತ್ತು ಪುತ್ತೂರು ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *