ಬಂಟ್ವಾಳ: ಬಿ.ಸಿ ರೋಡಿನಲ್ಲಿ ಹಿಂದೂ ಯುವತಿ ಕಕ್ಕೆಪದವಿನ ಲಾವಣ್ಯಳನ್ನು ಅಮಾನುಷವಾಗಿ ಹತ್ಯೆಗೈದ ಹಂತಕನಿಗೆ ಎನ್ ಕೌಂಟರ್ ಅಥವಾ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ
ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಬಿ.ಸಿ ರೋಡ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿ.ಹಿಂ.ಪ ಅಧ್ಯಕ್ಷ ಪ್ರಸಾದ್ ಕುಮಾರ್ ರೈಸಭೆಯನ್ನುದ್ದೇಶಿಸಿ ಮಾತನಾಡಿದರು. ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್, ಹಿಂದೂ ಪರ ಸಂಘಟನೆಯ ಪ್ರಮುಖರಾದ ಮುರುಳಿಕೃಷ್ಣ ಹಸಂತಡ್ಕ, ಶಿವಾನಂದ ಮೆಂಡನ್, ಪುನೀತ್ ಅತ್ತಾವರ, ಶ್ರೀಧರ್ ತೆಂಕಿಲ, ಕೇಶವ ದೈಪಲ, ಹಿಂ.ಜಾ.ವೇ ನರಸಿಂಹ ಮಾಣಿ, ಪ್ರಶಾಂತ್ ಕೆಂಪುಗುಡ್ಡೆ, ಯುವಸೇನೆಯ ಪ್ರಮುಖರಾದ ವಸಂತ ಮಣಿಹಳ್ಳ, ಬಿಜೆಪಿ ನಾಯಕರಾದ ಸುಲೋಚನ ಜಿ.ಕೆ.ಭಟ್ ,ಸುದರ್ಶನ್ ಬಜ, ದಿನೇಶ್ ದಂಬೆದಾರ್, ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ದೀಪಕ್ ಅಜೆಕಳ, ಪ್ರಖಂಡದ ಪ್ರಮುಖರು ಹಾಗೂ ಉಪಸ್ಥಿತರಿದ್ದರು.
ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
