ಬಂಟ್ವಾಳ: ದ.ಕ. ಜಿ. ಪಂ. ಕೃಷಿ ಇಲಾಖೆ ಬಂಟ್ವಾಳ ತಾಲೂಕು ಇದರ ವತಿಯಿಂದ 2026- 27ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಕಾವಳ ಮೂಡೂರು ಗ್ರಾಮದ ಕೊಡಮಣಿತ್ತಾಯ ದೈವಸ್ಥಾನದ ಸಭಾಂಗಣದಲ್ಲಿ ನಡೆಯಿತು.  ಕಾವಳ ಮುಡೂರು ಪ್ರಾ. ಕೃ. ಪ.ಸ. ಸಂಘದ ಅಧ್ಯಕ್ಷರು,ಬಂಟ್ವಾಳ ಕೃಷಿಕ ಸಮಾಜದ ಸದಸ್ಯರಾದ  ಪದ್ಮಶೇಖರ್ ಜೈನ್ ಅವರು  ಕಾರ್ಯಕ್ರಮವನ್ನು  ಉದ್ಘಾಟಿಸಿ ಚಾಲನೆ ನೀಡಿದರು.

ನೈಸರ್ಗಿಕ ಕೃಷಿಯ ಮಹತ್ವದ ಕುರಿತು ಮತ್ತು ರಾಷ್ಟ್ರೀಯ ನೈಸರ್ಗಿಕ ಅಭಿಯಾನಕ್ಕೆ ಹೊಸದಾಗಿ ಸೇರ್ಪಡೆಯಾದ ಬಂಟ್ವಾಳ ಹೋಬಳಿ ಕಾವಳಮುಡೂರು ಗ್ರಾಮದ ಗುಚ್ಛದ ಕುರಿತು ಬಂಟ್ವಾಳ ತಾಲೂಕಿನ ತಾಂತ್ರಿಕ ಕೃಷಿ ಅಧಿಕಾರಿಯಾದ  ನಂದನ್ ಶೆಣೈಯವರು  ಮಾಹಿತಿ ನೀಡಿದರು.
ಮಣ್ಣಿನ ಆರೋಗ್ಯ ಮತ್ತು ಬೆಳೆ ಉತ್ಪಾದನೆಯ ಬಗ್ಗೆ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ಹರೀಶ್ ಶೆಣೈ ಹಾಗೂ ಸಾವಯವ, ಸುಸ್ಥಿರ ಕೃಷಿ ಕುರಿತು ಮತ್ತು ತೋಟಗಾರಿಕಾ ಕೃಷಿ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗಶಾಸ್ತ್ರ ವಿಜ್ಞಾನಿ ಡಾಕ್ಟರ್ ಕೇದಾರನಾಥ ಮಾಹಿತಿ ನೀಡಿದರು.
ಕೃಷಿ ಇಲಾಖೆ ಸೌಲಭ್ಯದ ಬಗ್ಗೆ ತಾಂತ್ರಿಕ ಸಹಾಯಕರಾದ  ಹನುಮಂತ ಕಾಳಗಿ ಮಾಹಿತಿ ನೀಡಿದರೆ,2026-27 ನೇ ಸಾಲಿನ ರೈತ ಬೆಳೆ ಸಮೀಕ್ಷೆ ಕುರಿತು ಬಂಟ್ವಾಳ ಹೋಬಳಿಯ ತಾಂತ್ರಿಕ ಸಹಾಯಕರಾದ  ಚಂದ್ರಕಲಾ ಮಾಹಿತಿ ನೀಡಿದರು.
ಕಾವಳ ಮೂಡೂರು ಕೃಷಿ ಪರಿಷತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ  ದಯಾನಂದ ಶೆಟ್ಟಿ, ಬಂಟ್ವಾಳ ತಾಲೂಕು ಎನ್ ಆರ್ ಎಲ್ ಎಂ ತಾಲೂಕು ಮೇಲ್ವಿಚಾರಕರಾದ ದೀಕ್ಷಿತ ಕರ್ಕೇರಾ, ಕಾವಳಮೂಡುರು ಗ್ರಾಮ ಪಂಚಾಯತ್ ಕಾರ್ಯದರ್ಶಿ  ಉಷಾರಾಣಿ,ಬಂಟ್ವಾಳ ತಾಲೂಕು ಆತ್ಮ ಯೋಜನೆಯ ಬಿಟಿಎಂ ಕುಮಾರಿ ಸ್ನೇಹ ವೇದಿಕೆಯಲ್ಲಿದ್ದರು.  ಸಂಪೂರ್ಣ ಪ್ರಾರ್ಥಿಸಿದರು,
ಕಾವಳಮೂಡೂರು ಕೃಷಿ ಪರಿಷತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ನಸೀಬಾಬಾನು ಸ್ವಾಗತಿಸಿದರು, ಕು.ಸ್ನೇಹ ವಂದಿಸಿದರು. ಕಾವಳಮುಡೂರು ಸಂಜೀವಿನಿ ಒಕ್ಕೂಟದ ಎಂಬಿಕೆ, ಎಲ್ ಸಿ ಆರ್ ಪಿ ಹಾಗು ಗೋಳ್ತಮಜಲು ಕೃಷಿ ಸಖಿ ಉಪಸ್ಥಿತರಿದ್ದರು.
ಕಾವಳ ಮೂಡುರು  ರಾಷ್ಟ್ರೀಯ  ನೈಸರ್ಗಿಕ ಕೃಷಿ ಯೋಜನೆಯ ಗುಚ್ಚ ಸಂಪನ್ಮೂಲ ವ್ಯಕ್ತಿಗಳಾದ  ಸುಲೋಚನಾ, ಸೌಮ್ಯ ಉಪಸ್ಥಿತರಿದ್ದು ಸುಮಾರು 140 ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡಕೊಂಡರು. ಈ ಸಂದರ್ಭದಲ್ಲಿ ಜೀವಾಮೃತ ಹಾಗೂ ಅಗ್ನಿ ಅಸ್ತ್ರ ಜೈವಿಕ ಪರಿಕರ ತಯಾರಿ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು.

By Suddi9

Leave a Reply

Your email address will not be published. Required fields are marked *