ಬಂಟ್ವಾಳ: ಕಣಚೂರು ಎಜುಕೇಷನ್ ಟ್ರಸ್ಟ್ ದೇರಳಕಟ್ಟೆ ಇದರ ವೈದ್ಯಕೀಯ ತಂಡ ಮಂಚಿ ಆರೋಗ್ಯ ಕೇಂದ್ರದ ಸೇವಾಚಟುವಟಿಕೆಯ ಸಹಯೋಗ ಹೊಂದಿರುವ ತಂಡದಲ್ಲಿ ಹಲವಾರುವರ್ಷಗಳಿಂದ ಡಾ.ಗೋಪಾಲ ಆಚಾರ್ ಮಂಚಿ ಅವರು ಉಚಿತವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಸಂಸ್ಥೆಯು ಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ವಿಶಿಷ್ಟ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು

ಸಂಸ್ಥೆಯ ಅಧ್ಯಕ್ಷ ಡಾ. ಹಾಜಿ ಯು. ಕೆ. ಮೋನು ಅವರು ಈ ಸಂದರ್ಭ ಮಾತನಾಡಿ,ಡಾ.ಗೋಪಾಲ ಆಚಾರ್ ಮಂಚಿ ಅವರು ರೋಗಿಗಳಿಗೆ ಸಲ್ಲಿಸಿದ ನಿಸ್ವಾರ್ಥ ಸೇವೆ ಹಾಗೂ ಆಸ್ಪತ್ರೆಯ ಬೆಳವಣಿಗೆ ಮತ್ತು ಧ್ಯೇಯಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.ಸಂಸ್ಥೆಯ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.
