ಬಂಟ್ವಾಳ:   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್( ರಿ.) ಬಂಟ್ವಾಳ ಇದರ ವಗ್ಗ ವಲಯದ ಶ್ರೀ ಶಾರದಾಂಬ ನವ ಜೀವನ ಸಮಿತಿಯ ಸದಸ್ಯರ ಸಭೆ   ಕಾಡಬೆಟ್ಟು   ವಗ್ಗ ವಲಯ ಕಚೇರಿಯಲ್ಲಿ ನಡೆಯಿತು.
ಗ್ರಾಮಾಭಿವೃದ್ಧಿ ಯೋಜನೆಯತಾಲೂಕು ಯೋಜನಾಧಿಕಾರಿ ಜಯಾನಂದ ಪಿ .ನವ ಜೀವನ ಸದಸ್ಯರಿಗೆ ಸಲಹೆ ಸೂಚನೆಗಳನ್ನು ನೀಡಿ, ಯೋಜನೆಯಿಂದ ಸಮಿತಿಯ ಸದಸ್ಯರಿಗೆ ಸಿಗುವ ಸಹಕಾರದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ  ನವಜೀವನ ಸದಸ್ಯರು ತಮ್ಮ ಅನಿಸಿಕೆ ಯನ್ನು ವ್ಯಕ್ತಪಡಿಸಿದರು. ನಂತರ ಸದಸ್ಯರೆಲ್ಲರೂ ಸೇರಿ ಭಜನಾ ಕಾರ್ಯಕ್ರಮ ನೆರೆವೇರಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಶಾರದಾಂಬ ನವಜೀವನ ಸಮಿತಿಯ ಅಧ್ಯಕ್ಷರಾದ ಮಹಾಬಲ ಪೂಜಾರಿ, ವಾರದ ಸಭೆಯ ಅಧ್ಯಕ್ಷರಾದ ಲಿಂಗಪ್ಪ ಗೌಡ, ವಗ್ಗ ವಲಯ ಮೇಲ್ವಿಚಾರಕ ಸುರೇಶ್, ಜನಜಾಗೃತಿ ವೇದಿಕೆ ಸದಸ್ಯ ಪ್ರವೀಣ್ , ನವ ಜೀವನ ಸದಸ್ಯರು, ಒಕ್ಕೂಟ ಸೇವಾ ಪ್ರತಿನಿಧಿಗಳಾದ ರಜನಿ, ರೇಖಾ ಪಿ ಉಪಸ್ಥಿತರಿದ್ದರು. 

By Suddi9

Leave a Reply

Your email address will not be published. Required fields are marked *