ಬಂಟ್ವಾಳ: ವಿದ್ಯಾರ್ಥಿಗಳು ಜೀವನದಲ್ಲಿ ನಿರ್ಧಿಷ್ಟ ಗುರಿಯನ್ನಿರಿಸಿಕೊಂಡು ಮುನ್ನಡೆಯಬೇಕು, ನಿರಂತರವಾದ ಅಭ್ಯಾಸದಿಂದ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯೂಸೂಫ್ ಅವರು ಹೇಳಿದ್ದಾರೆ.

ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಉತ್ತಮ ಬೋಧಕವರ್ಗದ ಪರಿಶ್ರಮ, ಮಕ್ಕಳ ಹೆತ್ತವರ ಪ್ರೋತ್ಸಾಹದಿಂದಾಗಿ ಕಳೆದ ಸಾಲಿನಲ್ಲಿ ಬಿ.ಮೂಡ ಸರಕಾರಿ ಪ.ಪೂ.ಉತ್ತಮ ಫಲಿತಾಂಶ ದಾಖಲಿಸಲು ಸಾಧ್ಯವಾಗಿದ್ದು,ಆ ಮೂಲಕ ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದಿಗೂ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದಿರುವುದು ನಮಗೆಲ್ಲಾ ಹೆಮ್ಮೆ ತಂದಿದೆ, ಜಿಲ್ಲೆಯ ವಿವಿಧ ತಾಲೂಕಿನಿಂದಲೂ ವಿದ್ಯಾರ್ಥಿಗಳು ಈ ಸಂಸ್ಥೆಗೆ ಸೇರ್ಪಡೆಯಾಗುತ್ತಿದ್ದು,ವಿದ್ಯಾರ್ಥಿ ಗಳ ಸಂಖ್ಯೆಯು ಹೆಚ್ಚಾಗಿದೆ ಎಂದರು.
ಸಂಸ್ಥೆಯಲ್ಲಿ ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣ ಬೋಧನೆಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದೆ.ಅಶಿಸ್ತನ್ನು ಯಾವುದೇ ಕಾರಣಕ್ಕು ಸಹಿಸಲಾಗುವುದಿಲ್ಲ, ಮಕ್ಕಳ ಚಟುವಟಿಕೆಯ ಮೇಲೆ ಹೆತ್ತವರು ಕೂಡ ಸದಾ ನಿಗಾ ವಹಿಸಬೇಕು, ವಿದ್ಯಾರ್ಥಿಗಳು ಸಂಸ್ಥೆಯ ನಿಯಮಗಳನ್ನು ಮೀರಿ ವರ್ತಿಸಿದ್ದು ಕಂಡಬಂದಲ್ಲಿ ಅಂತಹ ವಿದ್ಯಾರ್ಥಿಗಳ ವಿರುದ್ದ ಕ್ರಮ ಕೈಗೊಳ್ಳುವುದಕ್ಕು ಹಿಂಜರಿಯುವುದಿಲ್ಲ ಎಂದ ಅವರು ಮಕ್ಕಳ ಭವಿಷ್ಯದ ಕುರಿತಂತೆ ಚಿಂತನ,ಮಂಥನ ನಡೆಸುವ ನಿಟ್ಟಿನಲ್ಲಿ ವರ್ಷದಲ್ಲಿ ಒಂದೆರಡು ಬಾರಿ ಪೋಷಕರ ಸಭೆ ಅಯೋಜಿಸಲಾಗುತ್ತಿದೆ ಹೊರತು ಇದನ್ನು ಅನ್ಯತಾ ಭಾವಿಸಬಾರದು ಎಂದರು.
ಉಪನ್ಯಾಸಕರಾದ ವಿನೋದ್ ಅವರು ದಿನದ ಒಂದರಿಂದ ಎರಡು ತಾಸು ಅಧ್ಯಯನದಲ್ಲಿ ತೊಡಗಿಸಿಕೊಂಡಾಗ ಸಿಇಟಿಯಂತ ಪರೀಕ್ಷೆಯನ್ನು ಸುಲಭವಾಗಿ ಬರೆಯಲುಸಾಧ್ಯವಾಗುತ್ತದೆ.ಈ ನಿಟ್ಟಿನಲ್ಲಿಸಂಸ್ಥೆಯ ವಿದ್ಯಾರ್ಥಿಗಳು ಹೀಗಿಂದೀಗಲೇ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ಉಪನ್ಯಾಸಕಿ ಸೌಮ್ಯಅವರು ಪ್ರಸ್ತಾವಿಸಿ, ಸ್ವಾಗತಿಸಿದರು.ಉಪನ್ಯಾಸಕರಾದ ಲವಿನಾ ಶಾಂತಿ, ಪುಣ್ಯಾವತಿ, ಪ್ರತಿಭಾ ಅವರು ವೇದಿಕೆಯಲ್ಲಿದ್ದರು.
ಉಪನ್ಯಾಸಕಿ ಹೇಮಾ ನಿರೂಪಿಸಿ,ಕೊನೆಯಲ್ಲಿ ವಂದಿಸಿದರು.
