ಬಂಟ್ವಾಳ: ಕಲ್ಲಡ್ಜ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು
 
ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ  ತಾಲೂಕು ಪಂಚಾಯತ್ ನ ಮಾಜಿ ಸದಸ್ಯ,   ಬಿಜೆಪಿ ಜಿಲ್ಲಾ ಪ್ರಬುದ್ಧರ ಪ್ರಕೋಷ್ಠದ ಸಹ ಸಂಚಾಲಕರಾದ ಮೋಹನ್ ಪಿ ಎಸ್ ಅವರು ವಿದ್ಯಾರ್ಥಿಸಂಘವನ್ನು ಉದ್ಘಾಟಿಸಿ  ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬಾಲ್ಯದಲ್ಲಿಯೇ ನಾಯಕತ್ವದ ಗುಣಗಳಾದ ಪರಸ್ಪರ ಸಹಕಾರ, ಸಹನೆ, ತಾಳ್ಮೆ ,ಸೇವಾ ಮನೋಭಾವ ಮೈಗೂಡಿಸಿಕೊಳ್ಳ ಬೇಕೆಂದರು.  
ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ  ವಸಂತ ಬಲ್ಲಾಳ್ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು.ವಿದ್ಯಾರ್ಥಿ ಸಂಘದ ನಿರ್ದೇಶಕಿ, ಗಣಿತಶಾಸ್ತ್ರದ ಉಪನ್ಯಾಸಕಿ ಜಯಲಕ್ಷ್ಮಿ ಚುನಾವಣೆ ಪ್ರಕ್ರಿಯೆಯ ವರದಿಯನ್ನು ವಾಚಿಸಿದರು. 
ಪೋಷಕರಾದ ಶ್ವೇತಾ ಕಾಮತ್ ವಿಟ್ಲ, ಶ್ರೀಮತಿ ರೋಹಿಣಿ ಅಡ್ಯಾರ್ ಕಟ್ಟೆ ಉಪಸ್ಥಿತರಿದ್ದರು.  ವಿದ್ಯಾರ್ಥಿಗಳಾದ ಕೃತಿಕಾ ಸ್ವಾಗತಿಸಿ,  ಕೃಪಾಲಿ ವಂದಿಸಿದಳು, ತೃಷಾ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *