ಬಂಟ್ವಾಳ : ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಮಾಣಿ ಗ್ರಾಮದ ಕುಳ್ಳಜೆಯಲ್ಲಿರುವ ಸುಬ್ರಮಣ್ಯ ಭಟ್ ಅವರ ನಿವಾಸದಲ್ಲಿ ಸಂಘಟನಾತ್ಮಕ ಹಾಗೂ ಎಸ್ ಐ ಆರ್  ಅಭಿಯಾನ ಅನುಷ್ಠಾನದ ಕುರಿತ ಸಭೆ ನಡೆಯಿತು.
ಈ ಸಂದರ್ಭದಲ್ಲಿಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಖರವಾದ ಮತದಾರರ ಪಟ್ಟಿಗೆ ಅತ್ಯಂತ ಮಹತ್ವವಿದ್ದು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯನ್ನು ಜವಾಬ್ದಾರಿಯುತವಾಗಿ ಕೈಗೊಳ್ಳಬೇಕು, ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು.


ಮತದಾರರ ಪಟ್ಟಿಯಲ್ಲಿನ ಅಗತ್ಯ ತಿದ್ದುಪಡಿಗಳು, ಹೊಸದಾಗಿ ಮತದಾನದ ಅರ್ಹತೆ ಪಡೆದವರ ನೋಂದಣಿ ಹಾಗೂ ಸಂಬಂಧಿತ ಪ್ರಕ್ರಿಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಯಾವುದೇ ಅರ್ಹ ಮತದಾರರು ಮಾಹಿತಿ ಕೊರತೆಯಿಂದ ತೊಂದರೆ ಅನುಭವಿಸದಂತೆ ಕಾರ್ಯಕರ್ತರು ಕಾಳಜಿ ವಹಿಸಬೇಕು ಎಂದು ಶಾಸಕರು ಕರೆ ನೀಡಿದರು.ಸಭೆಯಲ್ಲಿ ಎಸ್ ಐ ಆರ್ ಅಭಿಯಾನದ ಅನುಷ್ಠಾನ, ಮತದಾರರ ಪಟ್ಟಿಯ ಪರಿಷ್ಕರಣೆ, ಬೂತ್ ಮಟ್ಟದ ಕಾರ್ಯಚಟುವಟಿಕೆಗಳು ಹಾಗೂ ಕಾರ್ಯಕರ್ತರ ಜವಾಬ್ದಾರಿಗಳ ಕುರಿತು  ಚರ್ಚಿಸಲಾಯಿತು.

ಇದೇ ವೇಳೆ ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಇನ್ನಷ್ಟು ಸದೃಢಗೊಳಿಸುವುದು, ಕಾರ್ಯಕರ್ತರ ನಡುವಿನ ಸಮನ್ವಯವನ್ನು ಹೆಚ್ಚಿಸುವುದು ಹಾಗೂ ಜನರೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಳ್ಳುವ ಅಗತ್ಯದ ಕುರಿತು ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು.


ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೊಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ , ಶಿವಪ್ರಸಾದ ಕರೋಪಾಡಿ, ಪ್ರಮುಖರಾದ ಬಿ. ದೇವದಾಸ್ ಶೆಟ್ಟಿ, ಗಣೇಶ್ ರೈ ಮಾಣಿ, ಪುಷ್ಪರಾಜ್ ಚೌಟ, ನಾರಾಯಣ ಶೆಟ್ಟಿ, ಹರೀಶ್ ಕುಲಾಲ್, ಗಂಗಾಧರ್, ನಿತಿನ್ ಸಾಲ್ಯಾನ್, ಸುಶೀಲ, ಭವಾನಿ ಶೆಟ್ಟಿ, ಮೋಹನ್ ಗೌಡ, ಶರತ್, ಜಯಂತ, ಪುರುಷೋತ್ತಮ ಚೌಟ, ವಿಜಯಾನಂದ, ವನಿತಾ, ಸಂತೋಷ್, ಸುಬ್ರಮಣ್ಯ ಭಟ್ ಭರಣಿಕೆರೆ, ನಾಗೇಶ್ ಭಂಡಾರಿ, ಅರವಿಂದ್ ರೈ ವಿಟ್ಲಪಡ್ನೂರು ಸೇರಿದಂತೆ ಬೂತ್ ಅಧ್ಯಕ್ಷರು, ಬಿ.ಎಲ್.ಎ.-2 ಸದಸ್ಯರು, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *