ಬಂಟ್ವಾಳ :ಮೆಲ್ಕಾರ್ ಸಮೀಪದ ನರಹರಿ ಪರ್ವತದಲ್ಲಿ ಸಂಧ್ಯಾ ಭಜನಾ ಸಂಕೀರ್ತನೆಗೆ ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎರಕಳ ರಘುನಾಥ ಸೋಮಯಾಜಿಯವರು ದ್ವೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಬಳಿಕ ಶಂಭೂರು ಶ್ರೀರಾಮ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು.
ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಬದಿಗುಡ್ಡೆ ಜಗನ್ನಾಥ ಚೌಟ ಹಾಗೂ ಎರಕಳ ರಘುನಾಥ ಸೋಮಯಾಜಿ ಅವರು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯ ಸುತ್ತು ಪೌಳಿಯ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಸಲಹೆ ಸೂಚನೆ ನೀಡಿದರು.
ಈ ಸಂದರ್ಭ ಕ್ಷೇತ್ರದ ಆಡಳಿತ ಮೋಕ್ತೆಸರರಾದ ಡಾ| ಪ್ರಶಾಂತ್ ಮೂರ್ಲ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ| ಆತ್ಮರಂಜನ್ ರೈ,ಅರ್ಚಕರಾದ ಪರಮೇಶ್ವರ ಮಯ್ಯ ,ಉದಯ ಭಟ್,ಮ್ಯಾನೇಜರ್ ಆನಂದ್ ,ಮೋಕ್ತೆಸರುಗಳಾದ ಪ್ರತಿಭಾ ಎ.ರೈ ,ಮಾಧವ ಶೆಣೈ ,ಎಂ.ಎನ್ ಕುಮಾರ್ ,ಹಾಗೂ ಭಜನಾ ಸಂಯೋಜಕರಾದ ಶಂಕರ ಅಚಾರ್ಯ ಮತ್ತು ಸದಾಶಿವ ಬೊಂಡಾಲ ,ಉಲ್ಲಾಸ್ ರೈ ,ಶಿವಕುಮಾರ್ ,ಯೋಗೀಶ್ ,ವರುಣ್ ,ಪ್ರದೀಪ್ ,ಶಿಲ್ಪಿ ರಾಜೇಂದ್ರ ,ಕುಮಾರಿ ಶ್ರೀಶ ಬೊಂಡಾಲ ಮುಂತಾದವರು ಉಪಸ್ಥಿತರಿದ್ದರು.
