ಬಂಟ್ಚಾಳ: ಸಜೀಪ ನಡುಗ್ರಾಮ ಪಂಚಾಯತ್ , ಇಲ್ಮ್ ಇಂಡಿಯಾ ಮತ್ತು ರೆಡ್ ಡಾಟ್ ಮೆಡಿಕಲ್ಸ್ ಸಜೀಪ ನಡು ಇವುಗಳ ಆಶ್ರಯದಲ್ಲಿ ವೈದ್ಯರ ದಿನದ ಪ್ರಯುಕ್ತ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಮಾಡಿದ ವೈದ್ಯರು, ಸ್ಥಳೀಯ ವೈದ್ಯರು ಮತ್ತು ಆಶಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಲ್ಮ್ ಇಂಡಿಯಾ ಅಧ್ಯಕ್ಷರಾದ ನಾಸಿರ್ ಸಜೀಪ ಮಾತನಾಡಿ, ವೈದ್ಯರು ಜನರೊಂದಿಗೆ ಆತ್ಮೀಯತೆಯೊಂದಿಗೆ ಬೆರೆತಾಗ ರೋಗಿಯ ರೋಗವು ಆರ್ಧದಷ್ಟು ವಾಸಿಯಾಗುತ್ತಿದೆ. ವೈದ್ಯರುಗಳ ಸೇವಾ ಕಾರ್ಯ ಪ್ರಶಂಸನೀಯವಾಗಿಧ ಎಂದು ಹೇಳಿದರು. ಪಂ. ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ, ರೆಡ್ ಡಾಟ್ ಮೆಡಿಕಲ್ಸ್ ಮಾಲೀಕರಾದ ಇಸ್ಮಾಯಿಲ್ ನವಾಜ್ ಶುಭ ಹಾರೈಸಿದರು. ಕಾರ್ಯದರ್ಶಿ ಇಸ್ಮಾಯಿಲ್ ವಂದಿಸಿದರು. ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು 

By Suddi9

Leave a Reply

Your email address will not be published. Required fields are marked *