ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಭಾರತಿ ಹಿಂದಿ ಸಂಘವನ್ನು ಉದ್ಘಾಟಿಸಲಾಯಿತು.ಪುತ್ತೂರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಹಿಂದಿ ಶಿಕ್ಷಕಿ ಪ್ರಫುಲ್ಲಾ ಕೆ ದೀಪ  ಬೆಳಗಿಸಿ, ನಾಮಫಲಕದ ಅನಾವರಣ ಮಾಡುವ ಮೂಲಕ ಸಂಘದ  ಉದ್ಘಾಟನೆ ನೆರವೇರಿಸಿದರು.


ಬಳಿಕ ಮಾತನಾಡಿದ ಅವರು ಹಿಂದಿ ಭಾಷೆಯ ಮಹತ್ವ ,ಹಿಂದಿಯ ಪ್ರಾವೀಣ್ಯತಾ ಪರೀಕ್ಷೆಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಿದ್ಯಾಲಯದ ಪ್ರಾಂಶುಪಾಲರಾದ ವಸಂತ ಬಲ್ಲಾಳ್ ವಹಿಸಿ ಮಾತನಾಡಿ, ಭಾಷೆಯು ಕೇವಲ ಸಂವಹನದ ಮಾಧ್ಯಮವಲ್ಲ ಸಂಸ್ಕಾರದ ವಾಹಕ ಎಂದು ತಿಳಿಸಿದರಲ್ಲದೆ ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸಿದರು .
ಹಿಂದಿ ಸಂಘದ ನಿರ್ದೇಶಕಿ  ಅಶ್ವಿನಿ ಯನ್ ಉಪಸ್ಥಿತರಿದ್ದರು . ವಿದ್ಯಾರ್ಥಿನಿಗಳಾದ ವಿದ್ಯಾ  ಸ್ವಾಗತಿಸಿ ,ತ್ರಿಷಾ  ಅತಿಥಿಗಳನ್ನು ಪರಿಚಯಿಸಿದರು. ,ಅನುಶ್ರೀ ವಂದಿಸಿ ,ಹರ್ಷಿಣಿ ನಿರೂಪಿಸಿದರು

By Suddi9

Leave a Reply

Your email address will not be published. Required fields are marked *