ಬಂಟ್ವಾಳ: ಗಣೇಶ ಚತಿರ್ಥಿಯಂದುಮನೆ ತುಂಬಿಸಲು ಭಕ್ತರಿಗೆ ತೆನೆ ವಿತರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಜೀಪಮೂಡ ಗ್ರಾಮದ ಅನ್ನಪ್ಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದ ಗದ್ದೆಯಲ್ಲಿ ಭಾನುವಾರ ಸಾಮೂಹಿಕವಾಗಿ ಭತ್ತದ ಬೇಸಾಯ ಮಾಡಲಾಯಿತು.

ಇದರ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿದರು.ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು ಸಭಾಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಕೆ ರುಕ್ಮಯ ಪೂಜಾರಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ರವೀಂದ್ರ ಕಂಬಳಿ, ಬಿಜೆಪಿ ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು,ಶ್ರೀಕಾಂತ್ ಶೆಟ್ಟಿ ಸಂಕೇಶ,ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದಪ್ರಭಾಕರ ಶೆಟ್ಟಿ,ಮಂಜಲ್ ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ.ಕೃಷ್ಣಶಾಮ್, ಶಂಕರ ಯಾನೆ ಕೋಚಪೂಜಾರಿ, ಪ್ರದೀಪ್ ಶೆಟ್ಟಿ ಬಿಜಾಂತಾಡಿಗುತ್ತು, ಪ್ರೇಮ ಜಿ ಶೆಟ್ಟಿ,ಚಿನ್ನಯ ಸಾಲಿಯಾನ್, ಲಯನ್ ಸುಧಾಕರ ಆಚಾರ್ಯ, ಸಂಜೀವ ಪೂಜಾರಿ ಗುರು ಮಂದಿರ,,ಈಶ್ವರ ಮಂಗಳ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ,ಸ್ಥಳೀಯ ಗ್ರಾ.ಪಂ.ನ ಮಾಜಿ ಅಧ್ಯಕ್ಷರಾದ ವಿಶ್ವನಾಥ ಬೆಳ್ಚಡ, ಸಂಜೀವ ಪೂಜಾರಿ ಕುಚ್ಚಿ ಗುಡ್ಡೆ ಅವರು ಭಾಗವಹಿಸಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭ ದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್,ಬೋಳಿಯಾರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಅಧ್ಯಕ್ಷ
ಗಣೇಶ್ ಚೇಳೂರು,ಸ್ಥಳೀಯ ಪ್ರಮುಖರಾದ ರಮೇಶ ಅಣ್ಣಪಾಡಿ, ದೇವದಾಸ ಅನ್ನ ಪಾಡಿ, ಸುರೇಶ್ ಪೂಜಾರಿ, ಸುರೇಶ್ ಬಂಗೇರ, ಲಿಂಗಪ್ಪ ದೋಟ, ಪ್ರಶಾಂತ್ ಪೂಜಾರಿ, ಪ್ರಮೋದ್ ಸಾನದ ಮನೆ, ದೇವಾಲಯದ ಪ್ರಬಂಧಕ ಪ್ರಶಾಂತ್ ಕುಮಾರ್ ಮೊದಲಾದವರಿದ್ದರು.
