ಬಂಟ್ವಾಳ: ರಾಜ್ಯ ವಿಧಾನಪರಿಷತ್ ಗೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವ  ಪಿ.ವಿ. ಮೋಹನ್ ಅವರು ತಾಲೂಕಿನ ಕಳ್ಳಿಗೆಯಲ್ಲಿರುವ  ಮಾಜಿ ಸಚಿವರಾದ  ಬಿ. ರಮಾನಾಥ ರೈ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.


ಈ ಸಂದರ್ಭದಲ್ಲಿ ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳು, ಪಕ್ಷದ ಸಂಘಟನೆ ಹಾಗೂ ಜನಪರ ಕಾರ್ಯಕ್ರಮಗಳ ಕುರಿತು ಉಭಯ ನಾಯಕರು ಸುದೀರ್ಘವಾಗಿ ಚರ್ಚೆ ನಡೆಸಿದರು.

ಜಿಲ್ಲೆಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ ಪಕ್ಷದ ಸಂಘಟನಾ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಕುರಿತಂತೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಉಭಯ ನಾಯಕರು ವ್ಯಕ್ತಪಡಿಸಿದರು.
ಇದೇ ವೇಳೆ ವಿಧಾನ ಪರಿಷತ್ ಗೆ  ನೂತನವಾಗಿ ಆಯ್ಕೆಯಾದ ಪಿ.ವಿ.ಮೋಹನ್‌ ಅವರನ್ನು ಮಾಜಿ ಸಚಿವ ರಮಾನಾಥ ರೈ ಅವರು ಅಭಿನಂದಿಸಿ ಶುಭಹಾರೈಸಿದರು.ಪಕ್ಷದ ಮುಖಂಡ ಟಿ.ಕೆ.ಸುಧೀರ್ ಮತ್ತಿತರರಿದ್ದರು 

By Suddi9

Leave a Reply

Your email address will not be published. Required fields are marked *