ಬಂಟ್ವಾಳ : ಬಿಜೆಪಿ ಬಂಟ್ವಾಳ ಮಂಡಲ ಎಸ್.ಸಿ ಮೋರ್ಚಾದ ವತಿಯಿಂದ ಮಾಣಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಅನಂತಾಡಿ ಶಕ್ತಿ‌ ಕೇಂದ್ರದ ಶ್ರೀ ದೇವಿ ಮಂದಿರ ದೇವಿ ನಗರ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಇತ್ತೀಚೆಗೆ  ನಡೆಯಿತು.

ಶಾಸಕ ಶ್ರೀ ರಾಜೇಶ್ ನಾಯ್ಕ್ ಮಾತನಾಡಿ, ಬಂಟ್ವಾಳ ಮಂಡಲ ಎಸ್.ಸಿ ಮೋರ್ಚಾದ ವತಿಯಿಂದ “ಸೇವಾ ಈ ಪಾಕ್ಷಿಕ” ಎಂಬ ಹೆಸರಿನಲ್ಲಿ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿರುವುದು   ಶ್ಲಾಘನೀಯವಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಮಂಡಳದ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್ ವಹಿಸಿದ್ದರು.
ಬಿಜೆಪಿ ಮಂಡಲ ಎಸ್. ಸಿ ಮೋರ್ಚಾದ ಅಧ್ಯಕ್ಷರಾದ ರಮೇಶ್ ಕುದ್ರೆಬೆಟ್ಟು ,  ಬಂಟ್ವಾಳ ಮಂಡಳ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಮಂಡಲ ಕಾರ್ಯದರ್ಶಿ  ಸನತ್ ಕುಮಾರ್ ರೈ, ಮಾಣಿ ಮಹಾಶಕ್ತಿ ಕೇಂದ್ರ ಪ್ರದಾನ ಕಾರ್ಯದರ್ಶಿ ನಾಗೇಶ್ ಭಂಡಾರಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದಿನೇಶ್ ಅಮ್ಟೂರು, ಅನಂತಾಡಿ ಶಕ್ತಿ‌ ಕೇಂದ್ರದ ಪ್ರಮುಖ್  ಮಹಾಬಲ ಪೂಜಾರಿ, ಪ್ರದಾನ ಕಾರ್ಯದರ್ಶಿ  ಅಶೋಕ್ ಗೋಳಿ ಕೊಟ್ಟೆ, ಮಂಡಲ‌ ಸಹಕಾರ ಸಂಘಪ್ರಕೋಷ್ಟ ಸಂಚಾಲಕ  ಜಯರಾಮ್ ರೈ, ನೆಟ್ಲಮುಡ್ನೂರು ಶಕ್ತಿ ಕೇಂದ್ರ ಪ್ರಮುಖ್ ಧನಂಜಯ ಗೌಡ, ನೇರಳಕಟ್ಟೆ ಸಹಕಾರಿ ಸಂಘದ ಉಪಾಧ್ಯಕ್ಷ ತನಿಯಪ್ಪ ಗೌಡ, ನಿರ್ದೇಶಕರಾದ ವೆಂಕಟೇಶ್ ಕೋಟ್ಯಾನ್, ಅಶೋಕ್ ರೈ, ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ  ಗೀತಾ, ಮಹಿಳಾ ಪ್ರಮುಖ್  ಸುಶೀಲಾ ಆನಂದ್, ಬೂತ್ ಅಧ್ಯಕ್ಷ ನವೀನ್ ಆಚಾರ್, ಪ್ರಮುಖರಾದ ಪ್ರವೀಣ್ ಅಮ್ಟೂರು, ಕೃಷ್ಣಪ್ಪ ಗೌಡ, ಸುರ್ಬಹ್ಮಣ್ಯ‌ ಭಟ್, ದಿನೇಶ್ ಪಿಳಿಚಂಡಿಗುಡ್ಡೆ, ಮಹಾಬಲ ಆಳ್ವ, ಕಿರಣ್ ಗೋಳಿ ಕೊಟ್ಟೆ, ಶಿವರಾಮ್ ಶೆಟ್ಟಿ, ಮೋನಪ್ಪ ಕೂಡು ರಸ್ತೆ ಅನಂತಾಡಿ, ದೇವಿ ಟ್ರಸ್ಪ್ ಸದಸ್ಯರಾದ ಸಂಜೀವ್ ದೇವಿ ನಗರ, ಗಂಗಾಧರ್, ಶಿವಪ್ರಸಾದ್ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ನಾಗೇಶ್ ಭಂಡಾರಿ ಸ್ವಾಗತಿಸಿ,ಎಸ್.ಸಿ.ಮೋರ್ಛಾದ ಪ್ರ.ಕಾರ್ಯದರ್ಶಿ ಗೋಪಾಲ ಕಾರಗುಡ್ಡೆ ವಂದಿಸಿದರು. 

By Suddi9

Leave a Reply

Your email address will not be published. Required fields are marked *