ಬಂಟ್ವಾಳ : ಪೂರ್ವ ಪ್ರಾಥಮಿಕ ಹಂತವು ಶಿಕ್ಷಣದ ಮೊದಲ ಮೆಟ್ಟಿಲು, ಈ ಹಂತದಲ್ಲಿ ಪಡೆದ ಶಿಕ್ಷಣವು ಭವಿಷ್ಯದ ತಳಹದಿಯಾಗಿರುತ್ತದೆ ಎಂದು ಕಲ್ಲಡ್ಕ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಹೇಳಿದರು.
.

ಅವರು ವೀರಕಂಭಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ( ಎಲ್ ಕೆ ಜಿ ಮತ್ತು ಯು ಕೆ ಜಿ ) ಮಕ್ಕಳಿಗೆ   ಸರಕಾರದಿಂದ ದೊರೆತ  ಪಠ್ಯ ಪುಸ್ತಕಗಳನ್ನು  ವಿತರಿಸಿ   ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ
ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ, ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ ಜಿ,  ಶಿಕ್ಷಕ ಅಹ್ಮದ್ ತೌಸೀಫ್, ಪೂರ್ವ ಪ್ರಾಥಮಿಕ ತರಗತಿ ಶಿಕ್ಷಕಿಯರಾದ ಪಲ್ಲವಿ, ಸುಷ್ಮ, ಆಯಾ  ಮೀನಾಕ್ಷಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *