ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 2026-27ನೇ ಸಾಲಿನ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆಗತ-ಸ್ವಾಗತ ಕಾರ್ಯಕ್ರಮವು ಮಧುಕರ ಸಭಾಂಗಣದಲ್ಲಿ ನಡೆಯಿತು.ಆರಂಭದಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗುವುದರ ಮೂಲಕ ಸ್ವಾಗತಿಸಲಾಯಿತು. ಅತಿಥಿ ಅಭ್ಯಾಗತರು ದೀಪ ಪ್ರಜ್ವಲನೆ ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು.

ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದ ಜೊತೆ ಸಂಸ್ಕಾರ ಅಗತ್ಯ, ಜ್ಞಾನದ ಮೂಲ ಭಾರತ ಅದು ನಮಗೆ ಮಾದರಿಯಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯ ಮಾನ್ಯ ಶ್ರೀ ಶಾಂತರಾಮ ಬುದ್ನಾ ಸಿದ್ದಿ ಮಾತನಾಡಿ, “ಸಮಾಜವು ನಮಗೆ ಎಲ್ಲವನ್ನು ನೀಡಿದೆ ನಮ್ಮಿಂದ ಸಮಾಜಕ್ಕೆ ಏನಾದರೂ ನೀಡುವ ಪ್ರಜೆಗಳಾಗಬೇಕು ಎಂದರು.
ಮೈಸೂರು ಎಸ್.ಎಲ್.ವಿ. ಗ್ರೂಪ್ ನ ಚೇರ್ ಮ್ಯಾನ್ ದಿವಾಕರ ದಾಸ್,ಚಿಕ್ಕಮಗಳೂರು ಬನ್ಯಾನ್ ಎಂಟರ್‌ಪ್ರೈಸಸ್ ನ ಮ್ಯಾನೇಜಿಂಗ್ ಪಾರ್ಟನರ್ ನಿತೀಶ್ ಗೌಡ , ಮೋನಿಶಾ ನರಸಿಂಹ ಮೂರ್ತಿ ಚಿಕ್ಕಮಗಳೂರು ,
ಅಲಕೋಡ್ ಬೇಕಲ ಗೋಕುಲಂ ಗೋಶಾಲೆ ಪರಂಪರಾ ವಿದ್ಯಾಪೀಠಂನ
ನಾಗರತ್ನ ವಿಷ್ಣು ಹೆಬ್ಬಾರ್ ,ಉದ್ಯಮಿ ಸಂಜಯ್ ಮೇಲಾಂಟ, ಮಂಗಳೂರು ಸಾವಿತ್ರಿ ಮೆಮೊರಿಯಲ್ ಟ್ರಸ್ಟ್ ನ ವಿಶ್ವಾಸ ರಾವ್, ರಾಮದಾಸ್ ಶೆಟ್ಟಿ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು.
ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಣಿ ಸದಸ್ಯರಾದ ಕಮಲ ಪ್ರಭಾಕರ್ ಭಟ್ , ವಿದ್ಯಾ ಕೇಂದ್ರದ ಸಂಚಾಲಕರಾದ ವಸಂತ ಮಾಧವ ಶ್ರೀಮಾನ್, ಶ್ರೀರಾಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಗೋಪಾಲ್ ಎಂ ಮತ್ತು ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಘೃತಾಹುತಿಯನ್ನು ಮಾಡಿ, ಭಾರತಾಂಬೆಗೆ ಪುಷ್ಪಾರ್ಚನೆ ಮತ್ತು ಹಿರಿಯರಿಂದ ತಿಲಕ ಧಾರಣೆ ಯೊಂದಿಗೆ ಆಶೀರ್ವಾದ ಪಡೆದರು.
2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಭುವಿ ಗೀತೆಯನ್ನು ಹಾಡಿದಳು, ತೃಪ್ತಿ ನಿರೂಪಿಸಿದಳು, ಭೂಮಿಕಾ ಸ್ವಾಗತಿಸಿದಳು, ಪೂಜಿತ ವಂದಿಸಿದಳು,
