ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಜಾದ್ ಸಭಾಂಗಣದಲ್ಲಿ ಭಾಮತಿ ವಾಣಿಜ್ಯ ಸಂಘದ ವತಿಯಿಂದ ಶನಿವಾರ ಆಚರಿಸಲಾಯಿತು. ಅತಿಥಿಯಾಗಿ ಭಾಗವಹಿಸಿದ್ದ ಗಣೇಶ್ ಅವರು ಯೋಗದ ಮಹತ್ವವನ್ನು ವಿವರಿಸಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು, ಓದಿನಲ್ಲಿ ಆಸಕ್ತಿ ಬರಲು ಪ್ರತಿನಿತ್ಯ ಯೋಗ ಮಾಡಬೇಕು.

ಮಾನಸಿಕ ಮತ್ತು ದೈಹಿಕವಾಗಿ ಸದೃಢ ಜೀವನ ನಡೆಸುವಲ್ಲಿ ಯೋಗದ ಪಾತ್ರ ಮಹತ್ವವಾಗಿದ್ದು; ನಿತ್ಯ ಯೋಗ ಮಾಡಿದರೆ ಯೋಗ ನಮ್ಮನ್ನು ಕಾಯುತ್ತದೆ ಎಂದು ಹೇಳಿದರು. ಇನ್ನೋರ್ವ ಅತಿಥಿ ಆನಂದ್ ಯೋಗದ ಪ್ರಾತ್ಯಕ್ಷಿಕೆಯನ್ನು ನೀಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ನಡೆಸಿಕೊಟ್ಟರು.

ವಿದ್ಯಾರ್ಥಿಗಳು ಸರಳ ವ್ಯಾಯಮ, ಪ್ರಾಣಾಯಾಮ, ತಾಡಾಸನ, ವೃಕ್ಷಾಸನ, ವಜ್ರಾಸನ ಮುಂತಾದ ಆಸನಗಳ ಪ್ರಯೋಜನ ಪಡೆದುಕೊಂಡರು. ಕಾಲೇಜಿನ ಪ್ರಾಂಶುಪಾಲರಾದ ವಸಂತ್ ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಮಾರಿ ತೃಪ್ತಿ ಕಾರ್ಯಕ್ರಮ ನಿರ್ವಹಿಸಿದರು.
