ಗುರುಪುರ : ರಾಷ್ಟ್ರೀ ಯ ಹೆದ್ದಾರಿ 169ರ ಗುರುಪುರ ಬಂಡಸಾಲೆಯಲ್ಲಿ `ವಿ2 ಗೈಸ್’ ಸಂಘಟನೆಯು ದಾನಿಗಳ ನೆರವಿನಿಂದ, ಸುಮಾರು 7 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ವಿನೂತನ ಶೈಲಿಯ `ಬಸ್’ ತಂಗುದಾಣ ಜೂ. 14ರಂದು ಲೋಕಾರ್ಪಣೆಗೊಂಡಿತು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಶ್ರೀಪಾದರು ಬಸ್ ಮಾದರಿಯಲ್ಲಿ ನಿರ್ಮಿಸಲಾದ ಬಸ್ ತಂಗುದಾಣ ಉದ್ಘಾಟಿಸಿ ಮಾತನಾಡಿ, ಗುರುಪುರದ ಬಂಡಸಾಲೆಗೆ ಬ್ರಿಟಿಷ್ ಮತ್ತು ಪೋರ್ಚುಗೀಸರ ಆಳ್ವಿಕೆ ಕಾಲದ ಇತಿಹಾಸವಿದೆ. ಬಂಡಸಾಲೆಗೆ ಹತ್ತಿರದ ಫಲ್ಗುಣಿ ನದಿ ತಟದಿಂದ ಮಳಲಿಗೆ ಅಬ್ಬಕ್ಕ ರಾಣಿ ಆಡಳಿತಕ್ಕೆ ಸಂಬAಧಿಸಿದ ವ್ಯಾಪಾರ-ವಹಿವಾಟು ನಡೆಯುತ್ತಿತ್ತು. ಇತಿಹಾಸ ಪ್ರಸಿದ್ಧ ಬಂಡಸಾಲೆಯಲ್ಲಿ ಇಂದು ಕಂಡು ಕೇಳರಿಯದ ಮತ್ತು ಬಸ್ ನಿಲ್ದಾಣಕ್ಕೆ ಅನ್ವರ್ಥದ `ಬಸ್ ತಂಗುದಾಣ’ ನಿರ್ಮಾಣವಾಗಿದೆ. ಇದರ ಹಿಂದೆ `ವಿ2 ಗೈಸ್’ ಶ್ರಮವಿದೆ ಎಂದರು.

ಮAಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಇದೊಂದು ವಿನೂತನ ವಿನ್ಯಾಸದ ಬಸ್ ತಂಗುದಾಣ. ಇದರೊಳಗೆ ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಕ್ಯಾಮರಾ, ಬಸ್‌ನಂತೆ ಆಸನ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತಿತರ ಅಗತ್ಯ ಸೇವೆಗಳು ಒಳಗೊಂಡಿವೆ. ಯುವಕರ ತಂಡವೊAದರ ನೈಜ ಸಮಾಜಮುಖಿ ಕೆಲಸ ಇದಾಗಿದೆ. ಇಂತಹ ಯುವ ಶಕ್ತಿ ದೇಶಕ್ಕೆ ಆಸ್ತಿ ಎಂದರು.

 

ಸಮಾರಂಭದಲ್ಲಿ ಗುರುಪುರ ಕೆನರಾ ಬ್ಯಾಂಕ್ ಶಾಖೆಯ ಪ್ರಬಂಧಕ ಲೋಕನಾಥ, ಉದ್ಯಮಿ ನಿಟ್ಟೆಗುತ್ತು ರವಿರಾಜ ಶೆಟ್ಟಿ, ಬಿಜೆಪಿ ಪ್ರಮುಖರಾದ ರಾಜೇಶ್ ಕೊಟ್ಟಾರಿ, ದೇವಪ್ಪ ಪೂಜಾರಿ, ಸಚಿನ್ ಅಡಪ, ಸುನಿಲ್ ಗುರುಪುರ, ಬಜ್ಪೆ ಠಾಣೆಯ ಎಎಸ್‌ಐ ಕಾಂತಿನಾಥ್, ಜಯರಾಮ ಭಂಡಾರಿ ಗುರುಪುರ, ಉದ್ಯಮಿ ರೊನಾಲ್ಡ್ ಫೆರ್ನಾಂಡಿಸ್ ಪೆರ್ಮುದೆ ಮತ್ತಿತರು ಇದ್ದರು.

By Suddi9

Leave a Reply

Your email address will not be published. Required fields are marked *