ಬಂಟ್ವಾಳ :  ಸ್ವಚ್ಛ ಪರಿಸರ ನಮ್ಮ ಧ್ಯೇಯ, ಹಸಿರು ಬದುಕೆ ನಮ್ಮ ಶ್ರೇಯ,   ಮಾನವನ  ಆಸೆ ದುರಾಸೆಗಳ ಸರಮಾಲೆಯಿಂದ ಪರಿಸರವನ್ನು ನಾಶಪಡಿಸುತ್ತಾ ಸ್ವಾರ್ಥ ಜೀವನವನ್ನು ನಡೆಸುತ್ತಿದ್ದಾನೆ,ಪ್ರತಿಯೋರ್ವರು ತಮ್ಮ ಜನ್ಮದಿನಕ್ಕೆ ಗಿಡವನ್ನು ನೆಟ್ಟು ಬೆಳೆಸಿ ಜೀವನದಿದ್ದಕ್ಕೂ ಪೋಷಿಸುವುದರಿಂದ ಜೀವನಕ್ಕೂ ಒಂದು ಅರ್ಥ ಸಿಗುತ್ತದೆ . ಎಂದು ಸಂಸ್ಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷರು,ಜ್ಯೋತಿಷ್ಯರಾದ ಅನಿಲ್ ಪಂಡಿತ್ ರವರು ಹೇಳಿದರು.

ಶನಿವಾರ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ  (ರಿ)ಹಾಗೂ ಜವಾಹರ ಬಾಲ್ ಮಂಚ್ ಮಂಗಳೂರು ದಕ್ಷಿಣ ಕನ್ನಡ ಇದರ ಸಂಯುಕ್ತ ಆಶ್ರಯದಲ್ಲಿ ವೀರಕಂಬ ಗ್ರಾಮದ ಮಜಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ, ವನಮಹೋತ್ಸವ ಹಾಗೂ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾತ್ಸಲ್ಯ ಮಹಿಳಾ ಅಭಿವೃದ್ಧಿ ಮತ್ತು  ಸಂಶೋಧನಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಜವಾಹರ ಬಾಲ್ ಮಂಚ್ ದಕ್ಷಿಣ ಕನ್ನಡ ಇದರ ಜಿಲ್ಲಾಧ್ಯಕ್ಷರಾದ ಶೈಲಜಾ ರಾಜೇಶ್ ರವರು ಸಭಾಧ್ಯಕ್ಷತೆ ವಹಿಸಿ‌ಮಾತನಾಡಿ, ಪ್ರಕೃತಿ ನಾಶದಿಂದ ವಿಕೋಪಗಳು ಉಂಟಾಗುತ್ತದೆ  ಪರಿಸರದ ಶಿಕ್ಷಣವನ್ನು ನೀಡಿ ಪ್ರಜ್ಞಾವಂತ ಸಮಾಜವನ್ನು ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ಇದಕ್ಕು ಮೊದಲು   ಶಾಲಾ ಆವರಣದಲ್ಲಿ ಹಣ್ಣಿನ ಗಿಡವನ್ನು ನೆಟ್ಟು ಅದರ ಮಹತ್ವ ತಿಳಿಸಲಾಯಿತು.
ವಿದ್ಯಾರ್ಥಿಗಳಿಗೆ  ಸ್ವಚ್ಛ ಮತ್ತು ಸುಂದರ ಪರಿಸರದ ವಿಷಯದಲ್ಲಿ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಗಳನ್ನು  ಏರ್ಪಡಿಸಲಾಗಿದ್ದು, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ವಾತ್ಸಲ್ಯ ಮಹಿಳಾ ಅಭಿವೃದ್ಧಿ ಮತ್ತು  ಸಂಶೋಧನಾ ಸಂಸ್ಥೆಯ ಸದಸ್ಯೆ ಇಂದಿರಾ, ಶಾಲಾ ನಾಯಕ  ಮೊಹಮ್ಮದ್ ಹಾರೂನ್ ಫರ್ಹಾನ್, ಹಿರಿಯ ವಿದ್ಯಾರ್ಥಿ ಲಿಖಿತಾ, ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ  ಸ್ವಾಗತಿಸಿದರು, ಶಿಕ್ಷಕಿ ಸಂಪ್ರಿಯ ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು

By Suddi9

Leave a Reply

Your email address will not be published. Required fields are marked *