ಬಂಟ್ವಾಳ ತಾಲ್ಲೂಕಿನ ಇರ್ವತ್ತೂರು ಗ್ರಾಮದ ಮೂಡುಪಡುಕೋಡಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆದ 1954ನೇ ಅ.10ರಂದು ಏಕೋಪಾಧ್ಯಾಯ ಶಾಲೆಗೆ ಮುಖ್ಯೋಪಾಧ್ಯಾಯ ಎಂಬಂತೆ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡಿದ್ದು, ಇದೀಗ 60ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. 17btl-Mudupadukodi ಕಳೆದ 1976ರಲ್ಲಿ 6ನೇ ಮತ್ತು 1977ರಲ್ಲಿ 7ನೇ ತರಗತಿ ಆರಂಭಗೊಂಡಿರುವ ಈ ಗ್ರಾಮೀಣ ಶಾಲೆಯಲ್ಲಿ ಸಹಸ್ರಾರು ಮಂದಿ ಹಳ್ಳಿಯ ಕೃಷಿಕರು ಮತ್ತು ಕೂಲಿ  ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆದು ಸಾರ್ಥಕತೆ ಹೊಂದಿದ್ದಾರೆ. ಇಲ್ಲಿನ ಪ್ರಾಥಮಿಕ ಶಿಕ್ಷಣ ಪಡೆದ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಬಳಿಕ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ವೇಳೆ ಚಿನ್ನದ ಪದಕ ಮತ್ತಿತರ ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ. ಇನ್ನೂ ಹಲವರು ವಿವಿಧ ರಾಜ್ಯಗಳಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಸ್ಥಳೀಯವಾಗಿ ಹಲವು ಆಂಗ್ಲಮಾಧ್ಯಮ ಶಾಲೆಗಳು ತಲೆ ಎತ್ತಿದ್ದರೂ ಗುಣಮಟ್ಟದ ಶಿಕ್ಷಣದ ಮೂಲಕ ಸಾಕಷ್ಟು ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದೆ. ಶಿಕ್ಷಣದ ಜೊತೆಗೆ ಕ್ರೀಡೆ, ಶಾಲಾ ಕೈತೋಟ, ಪ್ರತಿಭಾ ಕಾರಂಜಿ, ಕಲಿಕೋತ್ಸವ, ಆಟಿಡೊಂಜಿ ಕೂಟ, ತುಳು ಸಾಹಿತ್ಯ ಉತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಇಲ್ಲಿನ ಶಾಲೆ ಗಮನ ಸೆಳೆದಿದೆ. ಕಳೆದ 2003ರಿಂದ 8ನೇ ತರಗತಿಗೆ ಬಡ್ತಿಗೊಂಡ ಶಾಲೆಯು ಇದೀಗ 6ನೇ ತರಗತಿಯಿಂದ ಪ್ರತ್ಯೇಕ ‘ಆಂಗ್ಲಮಾಧ್ಯಮ ವಿಭಾಗ’ ಆರಂಭಿಸಿದೆ. ಇನ್ಫೋಸಿಸ್ ಮತ್ತಿತರ ಸಂಸ್ಥೆಗಳ ನೆರವಿನಿಂದ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣ, ಆಂಗ್ಲಭಾಷೆಯಲ್ಲಿ ಪ್ರಾವೀಣ್ಯತೆ ಪಡೆಯುವಲ್ಲಿ ಸಾಧ್ಯವಾಗಿದೆ. ಇಲ್ಲಿನ ಅಕ್ಷರದಾಸೋಹಕ್ಕೆ ಸ್ವತಃ ಶಾಲೆಯಲ್ಲೇ ತರಕಾರಿ ಬೆಳೆದು, ಕೆಲವೊಮ್ಮೆ ಹೀರೆಕಾಯಿ ಮತ್ತಿತರ ತರಕಾರಿ ಬಳ್ಳಿ ಹರಡಿ ಶಾಲೆಗೆ ಹಸಿರು ಚಪ್ಪರ ಅಳವಡಿಸಿದಂತೆ ಗೋಚರಿಸುತ್ತಿದೆ. ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟ, ಕ್ಷೀರ ಭಾಗ್ಯ, ಉಚಿತ ಸೈಕಲ್ ಹೀಗೆ ಸರ್ಕಾರವು ನೀಡುತ್ತಿರುವ ಪ್ರೋತ್ಸಾಹ ಮಕ್ಕಳಿಗೆ ವರದಾನವಾಗಿ ಪರಿಣಮಿಸಿದೆ ಎನ್ನುತ್ತಾರೆ ಇಲ್ಲಿನ ನಾಗರಿಕರು. ಪ್ರಸಕ್ತ ಒಟ್ಟು 184 ಮಂದಿ ವಿದ್ಯಾರ್ಥಿಗಳಿದ್ದು, 6 ಶಿಕ್ಷಕರು, 3 ಮಂದಿ ಅಡುಗೆ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯ ಅಭಿವೃದ್ಧಿಯಲ್ಲಿ ಇಲ್ಲಿನ ಶಿಕ್ಷಕರ ಜೊತೆಗೆ ಮಕ್ಕಳ ಹೆತ್ತವರು ಕೂಡಾ ಸಹಕರಿಸುತ್ತಿದ್ದಾರೆ ಎಂಬ ಅಭಿಪ್ರಾಯ ಇಲ್ಲಿನ ಶಿಕ್ಷಕರಿಂದ ವ್ಯಕ್ತವಾಗಿದೆ. – ಮೋಹನ್ ಕೆ.ಶ್ರೀಯಾನ್

By Suddi9

Leave a Reply

Your email address will not be published. Required fields are marked *