ಬಂಟ್ವಾಳ: ಜಗತ್ತಿನಲ್ಲಿಯೇ ದೀರ್ಘಾವಧಿ (4399ದಿನ)ಸೇವೆ ಸಲ್ಲಿಸಿ ಐತಿಹಾಸಿಕ ದಾಖಲೆ‌ಯ ಆಡಳಿತ ನಡೆಸುತ್ತಿರುವ ದೇಶದ ಪ್ರಧಾನಿ  ನರೇಂದ್ರ ಮೋದಿಯವರಿಗೆ ದೀರ್ಘಾಯುಷ್ಯ ಮತ್ತು 2047ರ ವಿಕಸಿತ ಭಾರತದ ಸಂಕಲ್ಪ ಸಾಧನೆಯ ಯಶಸ್ಸಿಗಾಗಿ ಬಿಜೆಪಿ ಕಾರ್ಯಕರ್ತರು ಬುಧವಾರ ವಿವಿಧ ಕೇತ್ರಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಂಟ್ವಾಳ ಮಂಡಲದಿಂದ ಪೊಳಲಿಯಲ್ಲಿ ವಿಶೇಷ ಪೂಜೆ::


ಬಿಜೆಪಿ ಸಜಿಪಮುನ್ನೂರು ಮಹಾಶಕ್ತಿ ಕೇಂದ್ರದ ವತಿಯಿಂದ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಬಳಿಕ ಪರಿಸರದಲ್ಲಿ ಸಿಹಿ ತಿಂಡಿ ಹಂಚಲಾಯಿತು.ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ  ವೆಂಕಟೇಶ್ ನಾವಡ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ದೇವಪ್ಪ ಪೂಜಾರಿ, ಮಂಡಲ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ,  ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡು, ಪ್ರಮುಖರಾದ ಸುಭಾಶ್ಚಂದ್ರ ನಾಯಕ್ ಉಳಿಪಾಡಿಗುತ್ತು, ಕೃಷ್ಣರಾಜ್ ಮಾರ್ಲ ಮುತ್ತೂರು ,ಯಶವಂತ ಪೊಳಲಿ, ಯಶೋಧರ ಪೊಳಲಿ, ಲೋಕೇಶ್ ಭರಣಿ, ವಾಮನ ಆಚಾರ್ಯ ಕಾರ್ತಿಕ್ ಬಳ್ಳಾಲ್ , ಲೋಕೇಶ್ ಪಲ್ಲಿಪಾಡಿ, ಕೃಷ್ಣ ಪೊಳಲಿ ಮೊದಲಾದವರಿದ್ದರು.

ಬಿಜೆಪಿ ಬಂಟ್ವಾಳ ‌ಮಂಡಲದ ವತಿಯಿಂದ  ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
   ಈ ಸಂದರ್ಭದಲ್ಲಿ ಬಂಟ್ವಾಳ ಮಂಡಲದ ಬಿಜೆಪಿ ಅಧ್ಯಕ್ಷ  ಚೆನ್ನಪ್ಪ ಆರ್ ಕೋಟ್ಯಾನ್,
ಪಕ್ಷದ ಪ್ರಮುಖರಾದ ಗೋಪಾಲ ಸುವರ್ಣ,  ಸುಲೋಚನ ಜಿ.ಕೆ‌.ಭಟ್, ರಾಮದಾಸ್ ಬಂಟ್ವಾಳ,ರವೀಂದ್ರ ಕಂಬಳಿ,ಮಾದವ ಮಾವೆ, ಶಿವಪ್ರಸಾದ್ ಶೆಟ್ಟಿ, ಸಂದೇಶ್ ಶೆಟ್ಟಿ ಅರೆಬೆಟ್ಟು,ಕಮಲಾಕ್ಷಿ ಕೆ.ಪೂಜಾರಿ, ದಿನೇಶ್ ಅಮ್ಟೂರು, ಪುರುಷೋತ್ತಮ ಸಾಲಿಯಾನ್ ನರಿಕೊಂಬು,ಅಶೋಕ್ ಶೆಟ್ಟಿ ಸರಪಾಡಿ, ಸುರೇಶ್ ಕುಲಾಲ್, ಜನಾರ್ದನ ಬೊಂಡಾಲ, ಹರ್ಷಣಿ ಪುಷ್ಪಾನಂದ,ಹಿರಣ್ಮಯಿ, ರೂಪ ಶೆಟ್ಟಿ, ಲಖಿತಾ ಆರ್ ಶೆಟ್ಟಿ, ಹರಿ ಪ್ರಸಾದ್ ಭಂಡಾರಿ ಬೆಟ್ಟು,ಸುರೇಶ್ ಕೋಟ್ಯಾನ್,ಪ್ರಭಾಕರ್ ಪ್ರಭು, ಸಂಪತ್ ಕೋಟ್ಯಾನ್, ಪ್ರವೀಣ್ ಕುಮಾರ್, ಆನಂದ ಶಂಭೂರು,ಮೋಹನ್ ದಾಸ್ ಕೊಟ್ಟಾರಿ,ಕಿಶೋರ್ ಶೆಟ್ಟಿ, ಪ್ರೇಮನಾಥ ಶೆಟ್ಟಿ,ದಿನೇಶ್ ಝ್ಯೇಂಕ್ಯಾರ್, ರಜನಿ ,ಪ್ರಣಾಮ್ ರಾಜ್ ಅಜ್ಜಿಬೆಟ್ಟು, ಸುರೇಶ್ ಪೂಜಾರಿ, ಚಿದಾನಂದ ಪಟ್ಟೆಕೋಡಿ,ಲಕ್ಷಣ್ ಗೌಡ,ವಿಜಯ ನಾವೂರ, ವಿಜಯ ಅಮ್ಟಾಡಿ, ಮುತ್ತಪ್ಪ ಮಾಣಿ ಮತ್ತಿತರರಿದ್ದರು.

ನೆಟ್ಲ ದೇವಳದಲ್ಲಿ:
ಅದೇ ರೀತಿ‌ ಬಿಜೆಪಿ ಮುಖಂಡರು,ಮೋದಿ ಅಭಿಮಾನಿಗಳು ಹಾಗೂ ಭಕ್ತರು ಮೋಗರ್ನಾಡು ಸಾವಿರ ಸೀಮೆಯ ಒಡೆಯ ಶ್ರೀ ನೀಟಿಲಾಕ್ಷ ಸದಾಶಿವ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಾ.ಜ.ಪಾ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ  ನಿರ್ದೇಶಕರಾದ ಪ್ರಭಾಕರ ಶೆಟ್ಟಿ ಬೈದರಡ್ಕ ಓ.ಬಿ.ಸಿ ಮೋರ್ಚಾದ ಜಿಲ್ಲಾ ಪ್ರಮುಖರಾದ ಗೋಪಾಲ್ ಪೂಜಾರಿ, ಬಂಟ್ವಾಳ ಮಂಡಲ ಯುವ ಮೋರ್ಚಾದ ಕಾರ್ಯದರ್ಶಿ ಕೌಶಿಲ್ ಶೆಟ್ಟಿ. ಬಂಟ್ವಾಳ ಮಂಡಲ ಓಬಿಸಿ ಕಾರ್ಯದರ್ಶಿ  ಯತೀಶ್ ಮೂಳೀಕೊಡಂಗೆ, ಶಕ್ತಿ ಕೇಂದ್ರದ ಪ್ರಮುಖರಾದ  ಪ್ರವೀಣ್ ಕುಮಾರ್, ಬೂತ್ ಅಧ್ಯಕ್ಷರಾದ ಮಹಾಬಲ ಸಾಲಿಯನ್ ಮೂಳಿಕೊಡಂಗೆ,  ಶೇಖರ್ ಕೊಟ್ಟಾರಿ ಅಮ್ಟೂರು, ಕಾರ್ಯದರ್ಶಿ ಸಂದೀಪ್ ಶೆಟ್ಟಿ ಬೈದರಡ್ಕ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಆನಂದ ಎ ಶಂಭೂರು, ಜಿಲ್ಲಾ ಓ.ಬಿ.ಸಿ ಮೋರ್ಚಾದ ಪ್ರಮುಖರಾದ ಚಿದಾನಂದ ಪಟ್ಟೆಕೋಡಿ.  ವಾಣಿ ಶೆಟ್ಟಿ. ಪ್ರಮುಖರಾದ ಉಮೇಶ್ ಟಿ. ಪೂಜಾರಿ, ಜೀತೇಶ್ ಶೆಟ್ಟಿ ಬಾಳಿಕೆ, ಪವನ್ ಶೆಟ್ಟಿ ಬಾಳಿಕೆ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು
 

By Suddi9

Leave a Reply

Your email address will not be published. Required fields are marked *