ಬಂಟ್ವಾಳ: ತಾಲೂಕಿನ ವಿವಿಧ ಸರಕಾರಿ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.
ದಡ್ಡಲಕಾಡು: ಬಂಟ್ವಾಳಕ್ಕೆ ಸಮೀಪದ ದಡ್ಡಲಕಾಡು ಪಿಎಂಶ್ರಿ ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿಶ್ವ ಪರಿಸರದ ಮಹತ್ವವನ್ನು ತಿಳಿಸಲಾಯತಲ್ಲದೆ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಎಸ್ ಡಿಎಂಸಿ ಸದಸ್ಯರು ಗಿಡವನ್ನು ನೆಟ್ಟು ನೀರನ್ನು ಹಾಕಿ ಚಾಲನೆ ನೀಡಿದರು. ಪರಿಸರಕ್ಕೆ ಸಂಬಂಧಿಸಿದಘೋಷ ವಾಕ್ಯ ಗಳನ್ನು ಹೇಳಿ ಜಾಥಾ ನಡೆಸಿದರು.

ತದನಂತರ ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಪರಿಸರ ಧ್ಯೇಯ ದಡಿ ಶಾಲಾ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ಪಿಎಂಶ್ರೀ ವಿಟ್ಲ:
ಪಿಎಂ ಶ್ರೀ ವಿಟ್ಲ ಶಾಲೆಯ ಆವರಣದ ಇಲ್ಲಿ
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕೆಅಇವರು ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಯ ಸದಸ್ಯರು ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.
ವಾಮದಪದವು:
ತಾಲೂಕಿನ ಸರ್ಕಾರಿ ಪ್ರೌಢಶಾಲೆ ನಯನಾಡು ಹಾಗೂ ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವತಿಯಿಂದ ಶಾಲಾ ಅವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ತಾಲೂಕು ಇಸಿಒರಮಾನಂದ ನೂಜಿಪಾಡಿ,ಶಾಲಾ ಶಿಕ್ಷಕರು,ವಿದ್ಯಾರ್ಥಿಗಳು ಹಾಜರಿದ್ದರು
