ಮೂಡುಬಿದರೆ: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ದೇವಸ್ಥಾನದ ವಠಾರದಲ್ಲಿ ಬುಧವಾರ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಯಜ್ಞೇಶ್ವರ ಭಟ್ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಆಶೀವರ್ಚನ ನೀಡಿದರು.
mbd_dec17_2(a)

mbd_dec17_2
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ದೇಶಸ್ಥ ಬ್ರಾಹ್ಮಣರು ಧಾಮರ್ಿಕ,ಸಾಂಸ್ಕೃತಿಕ ಪ್ರಜ್ಞೆಯುಳ್ಳವರು. ಈ ಪ್ರಜ್ಞೆ ಅವರನ್ನು ಸಜ್ಜನರನ್ನಾಗಿಸಿದೆ. ದೇಶವ್ಯಾಪಿಯಿರುವ ದೇಶಸ್ಥ ಬ್ರಾಹ್ಮಣರನ್ನು ಒಟ್ಟುಗೂಡಿಸಲು ಶತಮಾನೋತ್ಸವ ಸಂಭ್ರಮ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಡಾ.ಆಳ್ವ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನದ ಶತಮಾನೋತ್ಸವ ಸಮಿತಿ ಅಧ್ಯಕ್ಷ ಪಿ.ಎನ್.ರಾಜರಾಮ್ ಸಮಾರಂಭ ಅಧ್ಯಕ್ಷತೆ ವಹಿಸಿ ಸ್ವಯಂ ಪ್ರೇರಿತರಾಗಿ ದೇವರ ಕೆಲಸಲ್ಲಿ ಪಾಲ್ಗೊಳುವಂತೆ ವಿನಂತಿಸಿದರು.
ಮಾಜಿ ಆಡಳಿತ ಮೊಕ್ತೇಸರ ವಿ.ಅಶ್ವತ್ಥಾಮ ಭಟ್, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ ರಾವ್ ಕೊಪ್ಲು, ಸದಸ್ಯರಾದ ವೇ.ಮೂ. ಪ್ರಭಾಕರ ಭಟ್, ವೇ.ಮೂ. ಗಣೇಶ್ ಭಟ್, ವಂಟಿಮಾರು ಅಂಬರೀಶ ರಾವ್, ಕೆ.ಶಿವಶಂಕರ ಮಾಯಣ, ನಾಗೇಶ್ ತಾವರೆ ಉಪಸ್ಥಿತರಿದ್ದರು.
ಕಿರಣ್ ಮಂಜನಬೈಲ್ ಕಾರ್ಯಕ್ರಮ ನಿರೂಪಿಸಿದರು. ಶಂಕರ್ಮೂತರ್ಿ ಕಾಯರ್ಬೆಟ್ಟು ವಂದಿಸಿದರು.

By suddi9

Leave a Reply

Your email address will not be published. Required fields are marked *