ಬಂಟ್ವಾಳ: ಕಾಶ್ಮೀರ ಪುರವಾಸಿನಿಯಾದ ವಿದ್ಯಾಮಾತೆ ಶಾರದೆಯು ವಿದ್ಯಾರ್ಥಿಗಳಿಗೆ ವಿದ್ಯಾ ಬುದ್ಧಿ ಜ್ಞಾನವನ್ನು ಅನುಗ್ರಹಿಸಲಿ ಮತ್ತು ಶಿಕ್ಷಕರು ಶಿಕ್ಷಣ ಯಜ್ಞದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಸರ್ಮತ್ತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು  ಬಂಟ್ವಾಳ ವಿದ್ಯಾನಿಕೇತನ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ  ಉದ್ಯಮಿ ಬಿ.ಸುರೇಶ್ ಬಾಳಿಗ ಹೇಳಿದರು. 

ಅವರು ಅಣ್ಣಪ್ಪ ಬಾಳಿಗ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ನಡೆಸಲ್ಪಡುವ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಸ್ಥೆಯ ಟ್ರಸ್ಟಿ ಕಿರಣ್ ಎಸ್. ಬಾಳಿಗ, ಕೋಶಾಧಿಕಾರಿ ಸಂಜಯ್ ಬಾಳಿಗ ಶುಭ ಹಾರೈಸಿದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ , ಕಿಂಡರ್ ಗಾರ್ಡನ್ ಶಿಕ್ಷಕಿ ಸವಿತಾ ಕಿರಣ್ , ಗೌರವ ಶಿಕ್ಷಕರಾದ ರಾಧಾಕೃಷ್ಣ ಬಾಳಿಗ , ಜಯಾನಂದ ಪೆರಾಜೆ ಉಪಸ್ಥಿತರಿದ್ದರು.
ಶಿಕ್ಷಕಿಯರು ಗುಲಾಬಿ ಹೂ ಮತ್ತು ಸಿಹಿಯನ್ನು ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಶಾಲೆಯನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು ಮಕ್ಕಳ ಪೋಷಕರು ಸಮಾಲೋಚನೆ ನಡೆಸಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 
 

By suddi9

Leave a Reply

Your email address will not be published. Required fields are marked *