ಬಂಟ್ವಾಳ: ತಾಲೂಕಿನ ದೇವಶ್ಯ ಮುಡೂರುದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ 2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಶಾಲಾ ಮಕ್ಕಳು ವೇಷ ಭೂಷಣಗಳೊಂದಿಗೆ ಮೆರವಣಿಗೆಯಲ್ಲಿ ಅಗಮಿಸಿದರು.ಶಾಲಾ ವಠಾರದಲ್ಲಿ ಶಿಕ್ಷಕರು ಮಕ್ಕಳಿಗೆ ಪುಪ್ಪವೃಷ್ಠಗೈದು, ಸಿಹಿ ತಿಂಡಿ ವಿತರಿಸಿ ಸ್ವಾಗತಿಸಿದರು.ಮಂಗಳೂರು ಸೇವಾ ಚಾರಿಟೇಬಲ್ ಟೇಸ್ಟ್ ವತಿಯಿಂದ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.
ಟ್ರಸ್ಟ್ ನ ಸಂಚಾಲಕ ಅರ್ಜುನ್ ಭಂಡಾರ್ಕರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಮುದಿಮಾರು, ಉಪಾಧ್ಯಕ್ಷ ಪ್ರಮೀಳಾ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಯಶವಂತ, ಸಾಹಿತಿ ನಾಡಮಣಿ, ಮುಖ್ಯ ಶಿಕ್ಷಕಿ ವಿಲ್ಮಾ, ಪ್ರಮುಖರಾದ ರಾಮಕೃಷ್ಣ ಮಯ್ಯ,ಸಹ ಮಕ್ಕಳ ಪೋಷಕರು,ಶಿಕ್ಷಕಿಯರು ಮತ್ತಿತರಿದ್ದರು.
